ADVERTISEMENT

ಜನಪದ ಲೋಕದಲ್ಲಿ ಹೀಗೇಕೆ?

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 19:30 IST
Last Updated 17 ಏಪ್ರಿಲ್ 2012, 19:30 IST

ಬೆಂಗಳೂರು ಮೈಸೂರು ರಸ್ತೆಯಲ್ಲಿ, ರಾಮನಗರ- ಚನ್ನಪಟ್ಟಣದ ಮಧ್ಯದಲ್ಲಿರುವ `ಜನಪದ ಲೋಕ~ವು ರಾಜಕೀಯ  ಚಟುವಟಿಕೆಗಳ ತಾಣವಾಗುತ್ತಿರುವುದು ವಿಷಾದಕರ ಸಂಗತಿಯಾಗಿದೆ.

 ಕಳೆದ ಬುಧವಾರ ಬೆಂಗಳೂರು ಪದವೀಧರರ ಕ್ಷೇತ್ರದ ಅಭ್ಯರ್ಥಿಯೊಬ್ಬರು ಶಿಕ್ಷಕರಿಗೆ, ಪದವೀಧರರಿಗೆ ಜನಪದ ಲೋಕದ `ದೊಡ್ಡಮನೆ~ಯಲ್ಲಿ ಮಾಂಸ ಮತ್ತು ಮದ್ಯದ ಪಾರ್ಟಿ ನೀಡಿದ್ದರು. ಈ ಪಾರ್ಟಿಯು `ಜನಪದ ಲೋಕ~ಕ್ಕೆ ಭೇಟಿ ನೀಡಿದ ಅನೇಕ ವೀಕ್ಷಕರಿಗೆ ಬೇಸರ ಉಂಟು ಮಾಡಿತು.

ಜನಪದ ಲೋಕವನ್ನು ನಿರ್ವಹಣೆ ಮಾಡುತ್ತಿರುವ ಪದಾಧಿಕಾರಿಗಳು ಇಂತಹ ಚಟುವಟಿಕೆಗಳಿಗೆ ಬಾಡಿಗೆಗೆ ನೀಡಬಾರದು. `ದೊಡ್ಡಮನೆ~ ಕುರಿತಾಗಿ ಅದರ ಸ್ಥಾಪಕ ಎಚ್.ಎಲ್. ನಾಗೇಗೌಡರ ಉದ್ದೇಶಗಳನ್ನು ಸ್ಮರಿಸಿಕೊಳ್ಳಬಾರದೇ..
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT