ADVERTISEMENT

ಜಾತಿಗಣತಿ ಬೇಕು

ಪ್ರೊ.ಟಿ.ನಾರಾಯಣಪ್ಪ, ಬೆಂಗಳೂರು
Published 12 ಫೆಬ್ರುವರಿ 2015, 19:30 IST
Last Updated 12 ಫೆಬ್ರುವರಿ 2015, 19:30 IST

ಜಾತಿಗಣತಿ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದು  ಸ್ವಾಗತಾರ್ಹ. ರಾಜ್ಯದಲ್ಲಿ ಜಾತಿ, ಉಪಜಾತಿ ಮತ್ತು ಒಳಪಂಗಡಗಳು ಲೆಕ್ಕವಿಲ್ಲದಷ್ಟು ಇವೆ.  ಶೈಕ್ಷಣಿಕವಾಗಿ, ಸಾಮಾ­ಜಿಕ­ವಾಗಿ, ಆರ್ಥಿಕವಾಗಿ ಹಿಂದುಳಿ­ದ­ವರ ಸಂಖ್ಯೆ, ಜಾತಿ ಮತ್ತು ಒಳಪಂಗಡಗಳನ್ನು ಗುರುತಿಸಿ ಅವರ ಸ್ಥಿತಿಗತಿ, ಜೀವನಮಟ್ಟ ಅರಿತು ಅವರನ್ನು ಮುಖ್ಯವಾಹಿನಿಗೆ ತರುವಂತಹ ಕೆಲಸವನ್ನು ಮಾಡಬೇಕಾದದ್ದು ಸರ್ಕಾರದ ಕರ್ತವ್ಯ. ಅದಕ್ಕೆ ಜಾತಿಗಣತಿ ನೆರವಾಗಲಿದೆ.  ಕಾಲಕಾಲಕ್ಕೆ ಜನಸಂಖ್ಯೆ ಬದಲಾಗುತ್ತಿರುತ್ತದೆ. ಅದಕ್ಕೆ ಅನುಗುಣವಾಗಿ ಯೋಜನೆಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯ ಇದೆ.

ಜಾತಿಗಣತಿ ಮಾಡುತ್ತಿರುವುದನ್ನು  ಜಾತಿ ಒಡೆಯುವ ಕೆಲಸವೆಂದು ನಾವೇಕೆ ನಕಾರಾ­ತ್ಮಕವಾಗಿ ಯೋಚಿಸಬೇಕು. ನಿಖರವಾದ ಜಾತಿ­ಗಣತಿ ಇಲ್ಲದಿದ್ದರೆ,   ಸಮಾಜದ ಕೊನೆಯ ವ್ಯಕ್ತಿಗೆ ಯಾವ ಆಧಾರದ ಮೇಲೆ ಸೌಲಭ್ಯ­ಗಳನ್ನು ನೀಡಲು ಸಾಧ್ಯ? ಅಂಕಿ ಅಂಶಗಳಿಲ್ಲದೆ ಮೀಸ­ಲಾತಿ ಕಲ್ಪಿಸುವುದಾದರೆ ಅದು ಅವೈಜ್ಞಾನಿಕವಾಗುವುದಿಲ್ಲವೇ? ಸಾಮಾಜಿಕ ಭದ್ರತೆಯನ್ನು ಒದಗಿಸುವುದಾದರೂ ಹೇಗೆ ಎಂಬ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ. ಈ ಎಲ್ಲಾ ಪ್ರಶ್ನೆಗಳಿಗೂ ಜಾತಿಗಣತಿಯೇ ಉತ್ತರ. ಆದಕಾರಣ ಜಾತಿಗಣತಿ ಅತ್ಯಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.