
ಶಾಲೆಗೆ ಹೋಗುವ ಮಾರ್ಗದಲ್ಲೇ ಸಿನಿಮಾಗಳ ಅಶ್ಲೀಲ ಭಿತ್ತಿ ಪತ್ರ ಅಂಟಿಸುತ್ತಿದ್ದಾರೆ. ಇವು ಎಳೆಮಕ್ಕಳ ಮನಸ್ಸಿನ ಮೇಲೆ ವಿಕೃತ ಪರಿಣಾಮಗಳನ್ನು ಬೀರುತ್ತವೆ. ಚಿತ್ರಮಂದಿರ ಮತ್ತು ಸ್ಥಳ ಇತ್ಯಾದಿ ಆ ಭಿತ್ತಿ ಪತ್ರದಲ್ಲಿದ್ದರೂ ಅವರ ವಿರುದ್ಧ ಕ್ರಮ ಕೈಗೊಂಡ ಉದಾಹರಣೆಗಳಿಲ್ಲ. ಶಾಲಾ ಆವರಣದಿಂದ ನಿಯಮಿತ ದೂರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಎಂದರೆ ಸಾಕೆ? ಇಂಥ ಭಿತ್ತಿ ಪತ್ರ ಅಂಟಿಸುವುದನ್ನು ನಿಷೇಧಿಸಬಾರದೆ? ಇಂಥ ಜಾಹೀರಾತುಗಳು ಬೇಕೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.