
ಮೂಢ ನಂಬಿಕೆಗಳನ್ನು ವಿರೋಧಿಸುವ ನೆಪ ದಲ್ಲಿ ಧರ್ಮ ಧಿಕ್ಕಾರ, ದೈವ ಧಿಕ್ಕಾರದ ಮಾತುಗಳು ಕೇಳಿಬರುತ್ತಿರುವುದು ಸಮಂಜಸವಲ್ಲ.
ದೇವರೇ ಇಲ್ಲ ಎಂದು ಪ್ರತಿಪಾದಿಸಿದ ಪೆರಿಯಾರ್ ಅವರ ಆದರ್ಶಗಳನ್ನು ಮನೆ ಮನೆಯಲ್ಲಿ ಬಿತ್ತಬೇಕಾದ ಅಗತ್ಯವಿದೆ ಎಂದು ಇತ್ತೀಚೆಗೆ ಮಾಜಿ ಸಚಿವೆಯೊಬ್ಬರು ಹೇಳಿರುವ ಮಾತು ಜೀವನ ಧರ್ಮಕ್ಕೆ ಕೊಳ್ಳಿ ಇಟ್ಟಂತಿದೆ. ಮನೆಯೊಳಗೆ ಕುಳಿತು ಮನೆಯನ್ನು ಉರುಳಿ ಸುವುದು ಅಪಾಯಕರ. ಪ್ರಚಾರದ ಗೀಳಿಗೆ ಬಿದ್ದು ಕೆಲವರು ಈ ಕೆಲಸ ಮಾಡುತ್ತಿದ್ದಾರೆ.
ದೇವರನ್ನು ನಂಬದೆ ಕೆಡುವುದಕ್ಕಿಂತ ನಂಬಿ ಕೆಡುವುದೇ (?) ಲೇಸಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.