ಕನ್ನಡಿಗರಿಗೆ ಮಹಾರಾಷ್ಟ್ರದಿಂದ
ಒಂದು ಹನಿ ನೀರು ಕೊಟ್ಟರೆ
ಹಾವಿಗೆ ಹಾಲೆರೆದಂತೆ ಎಂದು
ಹೇಳಿದೆ ಮುದಿ ಹುಲಿ
ಬಹಳ ಉದ್ದದ ನಾಲಿಗೆಯ
ಶಿವಸೇನೆಯ ಬಾಳಾ ಠಾಕ್ರೆಗೆ
ಏನೂ ಮಾಡದ
ಭಾಷೆಯ ಕತ್ತಿ ಹಿರಿದು
ಕನ್ನಡಿಗರ ಮೇಲೆರಗುವುದೆಂದರೆ
ಎಂದಿನಿಂದ ಬಹು ಪ್ರೀತಿ.
ಕೆಲಸವಿಲ್ಲದವ
ಅದೇನೊ ಕೆತ್ತಿದಂತೆ
ಠಾಕ್ರೆಯ ರೀತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.