ಮಡಿವಾಳದ ಮಾರುತಿ ನಗರದ ಶ್ರೀ ಅಯ್ಯಪ್ಪ ದೇವಸ್ಥಾನದ ಪಾರ್ಕಿನ ಬಳಿ ಸುಮಾರು 20-30 ವರ್ಷಗಳಿಂದಲೂ ಬಸ್ಸುಗಳ ನಿಲುಗಡೆ ತಾಣವಿತ್ತು. ದೇವಸ್ಥಾನದ ಮುಂಭಾಗದಲ್ಲಿ ಅಂಡರ್ ಪಾಸು ನಿರ್ಮಿಸುವ ಸಮಯದಲ್ಲಿ ಬಸ್ಸುಗಳು ಬರುತ್ತಿರಲಿಲ್ಲ. ಈಗ ಅಂಡರ್‌ಪಾಸು ಕೆಲಸ ಮುಗಿದು ಒಂದು ವರ್ಷ ಕಳೆದಿದೆ.
ಎಲ್ಲಾ ಬಸ್ಸುಗಳು ಅಂಡರ್ ಪಾಸ್‌ನಲ್ಲಿಯೇ ಹೋಗುತ್ತವೆ. ಆದ್ದರಿಂದ ಬಸ್ಸಿಗೆ ಬರುವ ಸಾರ್ವಜನಿಕರು, ವಿದ್ಯಾರ್ಥಿಗಳು ಸುಮಾರು ಒಂದು ಕಿಲೋಮೀಟರ್ ದೂರ (ಅಂದರೆ ಮಡಿವಾಳ ಪೊಲೀಸ್ ಸ್ಟೇಷನ್ ಹತ್ತಿರ ಇಲ್ಲದಿದ್ದರೆ ಸೇಂಟ್ ಜಾನ್ಸ್ ಆಸ್ಪತ್ರೆ ಕ್ವಾರ್ಟಸ್ ಹತ್ತಿರ) ನಡೆದು ಹೋಗಬೇಕಾಗುತ್ತದೆ. ಮುಂದೆ ಎಸ್. ವಿ. ಆಸ್ಪತ್ರೆ ಬಳಿ 50ಅಡಿ ಜೋಡಿ ರಸ್ತೆ ಇರುತ್ತದೆ.
ಇಲ್ಲಿ ಬಸ್ಸು ತಂಗುದಾಣ ನಿರ್ಮಿಸಬಹುದು. ಕೆಂಪೇಗೌಡ ಬಸ್ ನಿಲ್ದಾಣ, ಸಿಟಿ ಮಾರ್ಕೆಟ್, ಶಿವಾಜಿನಗರ ಕಡೆ ಹೋಗಲು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ದಯವಿಟ್ಟು ಈ ಮೇಲ್ಕಂಡ ನಿಲ್ದಾಣಕ್ಕೆ ಬಂದು ಹೋಗುವವರ ಅನುಕೂಲಕ್ಕಾಗಿ ಬಸ್ಸು ತಂಗುದಾಣ ನಿರ್ಮಿಸಬೇಕಾಗಿ ಮನವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.