ADVERTISEMENT

ತೆಂಗು ಬೆಳೆಗಾರರ ಗೋಳು

ಡಾ.ಬಿ.ಆರ್.‌ ಸತ್ಯನಾರಾಯಣ
Published 12 ಜೂನ್ 2013, 19:59 IST
Last Updated 12 ಜೂನ್ 2013, 19:59 IST

ತೆಂಗು ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡುತ್ತೇವೆ ಎಂದು ರಾಜ್ಯ ಸರ್ಕಾರ ಇನ್ನೂ ಮಾತಿನ ಮಂಟಪ ಕಟ್ಟುತ್ತಿದೆ. (ಪ್ರಜಾವಾಣಿ, ಜೂ. 8) ಎರಡು ವರ್ಷಗಳ ಹಿಂದೆ ಕ್ವಿಂಟಲ್‌ಗೆ  ಸುಮಾರು 7000 ರೂಪಾಯಿ ಹತ್ತಿರವಿದ್ದ ಬೆಲೆ ಇಂದು 4350 ರೂಪಾಯಿಗೆ ಇಳಿದಿದೆ.

5500 ರೂಪಾಯಿ ಬೆಂಬಲ ಬೆಲೆ ನೀಡಿ ಕೊಬ್ಬರಿ ಖರೀದಿ ಮಾಡುತ್ತೇವೆ ಎಂದು ಸರ್ಕಾರ ಹೇಳುತ್ತಲೇ ಬಂದಿದೆ. ಆದರೆ ತಾಲ್ಲೂಕು ಕೇಂದ್ರಗಳಲ್ಲಿನ ಖರೀದಿ ಕೇಂದ್ರಗಳು ಯಾವಾಗ ಬಾಗಿಲು ತೆಗೆಯುತ್ತವೆ, ಮುಚ್ಚುತ್ತವೆ ಎಂಬುದೇ ತಿಳಿಯುವುದಿಲ್ಲ. ಇನ್ನು ಅಲ್ಲಿಗೆ ತೆಗೆದುಕೊಂಡ ಹೋದ ಕೊಬ್ಬರಿಯೆಲ್ಲವನ್ನು ಅವರು ಕೊಳ್ಳುವುದೂ ಇಲ್ಲ. ಕೇಳಿದರೆ, ಸರ್ಕಾರದಿಂದ ನಮಗೆ ಅನುಮತಿ ಇಲ್ಲ,  ಹಣ ಇಲ್ಲ, ಇತ್ಯಾದಿ ಸಿದ್ಧ ಉತ್ತರಗಳನ್ನು ಹೇಳುತ್ತಾರೆ.

ಆರಿಸಿದ ಕೊಬ್ಬರಿಯನ್ನು ಮಾತ್ರ ಕೊಳ್ಳುವುದರಿಂದ, ಉಳಿದ ಕೊಬ್ಬರಿಯನ್ನು ಕೇಳಿದ ಬೆಲೆಗೆ ಮಾರಬೇಕಾದ ಸಂದಿಗ್ಧತೆಗೂ ಬೆಳೆಗಾರ ಸಿಕ್ಕಿಹಾಕಿಕೊಂಡಿದ್ದಾನೆ. ಅಲ್ಲಿಗೆ ಕೊಬ್ಬರಿ ತೆಗೆದುಕೊಂಡು ಹೋಗಲು ಎರಡು ಮೂರು ತಿಂಗಳು ಮೊದಲೇ ಅನುಮತಿ ಪಡೆದಿರಬೇಕು.

ಈ ಓಡಾಟದಲ್ಲೇ ರೈತ ಹೈರಾಣವಾಗಿ ಹೋಗುತ್ತಿದ್ದಾನೆ. ಒಟ್ಟಾರೆಯಾಗಿ ಖರೀದಿ ಕೇಂದ್ರಗಳು ಗೊಂದಲದ ಗೂಡುಗಳಾಗಿವೆ; ಭ್ರಷ್ಟಾಚಾರದ ಕೇಂದ್ರಗಳಾಗಿವೆ. ಖರೀದಿ ಕೇಂದ್ರಕ್ಕೆ ತಂದ ಎಲ್ಲ ಕೊಬ್ಬರಿಗೂ ಬೆಂಬಲ ಬೆಲೆ ಸಿಗುವಂತಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ಆದಷ್ಟು ಬೇಗ ಕಾರ್ಯಪ್ರವೃತ್ತವಾಗಬೇಕು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.