ADVERTISEMENT

ತೈಲ ಎರೆವ ಮೌಢ್ಯ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2017, 19:30 IST
Last Updated 2 ಅಕ್ಟೋಬರ್ 2017, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೌಢ್ಯ ವಿರೋಧಿ ಮಸೂದೆಯನ್ನು ನವೆಂಬರ್‌ನಲ್ಲಿ ಶಾಸನ ರೂಪಕ್ಕೆ ತರಲು ರಾಜ್ಯ ಸರ್ಕಾರ ತೀರ್ಮಾನಿಸಿರುವುದು ಸಂತಸದ ವಿಷಯ. ಹಾಗೆಯೇ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ಉಜ್ಜಯನಿಯ ಮರುಳಸಿದ್ಧೇಶ್ವರ ಜಾತ್ರೆಯಲ್ಲಿ ಗೋಪುರ ಶಿಖರಕ್ಕೆ ತೈಲ ಎರೆಯುವ ಪದ್ಧತಿಯೂ ನಿಲ್ಲಬೇಕು. ಇದರಿಂದ ಕೋಟ್ಯಂತರ ರೂಪಾಯಿಗಳ ತೈಲ ವ್ಯರ್ಥವಾಗುತ್ತದೆ. ಅಲ್ಲದೇ ಶಿಖರದ ಅತ್ಯದ್ಭುತ ಶಿಲ್ಪ ಕಲಾಕೃತಿಗಳು ಮೇಣ ಹಿಡಿದು ಕಾಣದಂತಾಗಿವೆ.

ಕೊಡಗಟ್ಟಲೆ ತೈಲವನ್ನು ಎರೆದು ಹರಕೆ ತೀರಿಸುವ ಭಕ್ತರಿಂದ ಇಲ್ಲಿ ತೈಲದ ಹಳ್ಳವೇ ಹರಿಯುತ್ತದೆ. ಮೊದಲ ಹರಕೆ ಸಲ್ಲಿಸುವ ಜರಿಮಲೆ ಪಾಳೇಗಾರರು ಬಡತನದ ಹೀನಸ್ಥಿತಿಯಲ್ಲಿದ್ದರೂ ಸಾಲ ಮಾಡಿಯಾದರೂ ಈ ಕಾರ್ಯ ಕೈಗೊಳ್ಳುತ್ತಿರುವುದು ಮರುಕ ಹುಟ್ಟಿಸುತ್ತದೆ. ಪರಂಪರೆಯನ್ನು ನಿಲ್ಲಿಸಲಾರದ ಹಟವಿದ್ದಲ್ಲಿ ಚಿಕ್ಕ ಗೋಪುರಾಕೃತಿ ಮಾದರಿಯನ್ನು ತಟ್ಟೆಯಲ್ಲಿಟ್ಟು ಚಮಚದಿಂದ ತೈಲವೆರೆಯಲಿ.

ವಿಜ್ಞಾನ–ವೈಚಾರಿಕ ಯುಗದಲ್ಲೂ ಈ ಥರದ ಮೌಢ್ಯಾಚರಣೆಗಳು ಕಣ್ಣೆದುರೇ ನಡೆಯುತ್ತಿದ್ದರೂ ಯಾರೂ ಚಕಾರವೆತ್ತದಿರುವುದು ಬೇಸರದ ಸಂಗತಿ. ನಮ್ಮ ಜೀವಿತಾವಧಿಯಲ್ಲೇ ಈ ಮೌಢ್ಯಾಚರಣೆ ನಿಲ್ಲುವುದನ್ನು ನೋಡುವ ಭಾಗ್ಯ ನಮ್ಮೆಲ್ಲರದಾಗಲಿ.

ADVERTISEMENT

–ಮೇಟಿ ಕೊಟ್ರಪ್ಪ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.