ADVERTISEMENT

ದಾಸರಹಳ್ಳಿ: ರಸ್ತೆ ಮೇಲೆ ಹರಿವ ಮೋರಿ ನೀರಿಗೆ ಮುಕ್ತಿ ನೀಡಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 10 ಜೂನ್ 2013, 19:59 IST
Last Updated 10 ಜೂನ್ 2013, 19:59 IST

ಮಾಗಡಿ ರಸ್ತೆಯ ದಾಸರಹಳ್ಳಿ ಬಸ್ ನಿಲ್ದಾಣದ ಮುಂದೆ ಸುಮಾರು ಹತ್ತು ದಿನಗಳಿಂದ ಮೋರಿಯಿಂದ ಕೊಚ್ಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಅಲ್ಲೆ ಬಸ್‌ಗಾಗಿ ಕಾಯುವ ನೂರಾರು ಜನ ಸದಾ ನಿಂತಿರುತ್ತಾರೆ. ಅಂಗಡಿ ಮುಂಗಟ್ಟು ಇದೆ. ರಸ್ತೆ ಬದಿ ವ್ಯಾಪಾರ ಮಾಡುವ ಜನರಿದ್ದಾರೆ. ಟ್ರಾಫಿಕ್ ಪೊಲೀಸರು ಅಲ್ಲೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆದರೆ ಇಷ್ಟು ದಿನದರೂ ಈ ಬಗ್ಗೆ ಇವರ‌್ಯಾರೂ ಪಾಲಿಕೆಯ ಗಮನ ಸೆಳೆದಿಲ್ಲವೋ  ಅಥವಾ ಪಾಲಿಕೆಯವರು ಕ್ರಮ ಕೈಗೊಂಡಿಲ್ಲವೋ ಗೊತ್ತಿಲ್ಲ. ಆದರೆ ಅಲ್ಲಿ ಸಂಚರಿಸುವವರಿಗೆ ನಿತ್ಯ ದುರ್ವಾಸನೆಯುಕ್ತ ನೀರಿನ ಮೇಲೆ ಹೋಗುವ ಕರ್ಮ.

ಅದರಲ್ಲೂ ವೇಗವಾಗಿ ಕಾರು ಬಸ್‌ಗಳು ಹೋಗುವಾಗ ದ್ವಿಚಕ್ರ ವಾಹನ ಸವಾರರ ಮೇಲೆ ಕೊಚ್ಚೆ ನೀರು ಹಾರಿ ತೊಂದರೆಯಾಗುತ್ತಿದೆ. ಇದು ನಿತ್ಯ ಕಾಣುವ ಚಿತ್ರಣ. ಕೂಡಲೇ ಸಂಬಂಧಪಟ್ಟವರು ಈ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು.
-ನಿತ್ಯ ಪ್ರಯಾಣಿಕರು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.