ADVERTISEMENT

ದಾಸ್ಯ ಪ್ರಜ್ಞೆ?

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 19:30 IST
Last Updated 30 ಮಾರ್ಚ್ 2018, 19:30 IST

‘ಪುರುಷನಾಮ: ಆಕ್ಷೇಪಾರ್ಹ ವ್ಯಂಗ್ಯ’ (ವಾ.ವಾ., ಮಾರ್ಚ್‌ 24). ನನ್ನ ಪತ್ರದಲ್ಲಿದ್ದುದು ವ್ಯಂಗ್ಯವಲ್ಲ, ಹಾಸ್ಯ! (ಮಹಿಳೆಯರಲ್ಲಿ ಹಾಸ್ಯಪ್ರಜ್ಞೆ ಕಡಮೆ? ದಾಸ್ಯ ಪ್ರಜ್ಞೆಯೇನೊ ಉಂಟು!)

ಹೇಗೊ ಏನೊ ನಾನೊಬ್ಬ ಮಹಿಳಾ ವಿರೋಧಿ ಲೇಖಕ ಎಂಬ ತಪ್ಪು ಭಾವನೆ ಬೆಳೆದುಬಂದಿದೆ. ಮಹಿಳಾಪರವಾದ ನನ್ನ ಬರಹಗಳು ಅಲಕ್ಷಿತವಾಗಿವೆ! (ಜಾಣಗುರುಡು?) ನನ್ನ ಪತ್ರದ ಉಳಿದ ಭಾಗವನ್ನು ಕೈ ಬಿಟ್ಟು, ತಮಗೆ ಬೇಕಾದ ಒಂದು ವಾಕ್ಯವನ್ನು ಮಾತ್ರ ಎತ್ತಿಕೊಂಡು ಸರೋಜ ನನ್ನನ್ನು ಆಕ್ಷೇಪಿಸಿದ್ದಾರೆ!

ಹೀಗೆಯೆ ಬರೆಯುತ್ತಿದ್ದರೆ, ನನ್ನ ಮೇಲೆ ಕ್ರಮ ಕೈಗೊಳ್ಳುವುದಾಗಿ ಕೆಲವರು ಮಹಿಳೆಯರು ಹಿಂದೆಯೆ ಒಂದು ಸ್ಥಳೀಯ ಪತ್ರಿಕೆಯಲ್ಲಿ ಎಚ್ಚರಿಕೆ ಕೊಟ್ಟಿದ್ದರು! ಈಗ ಅವರಿಗೆ ಹೆಚ್ಚಿನ ‘ಬಲ’ ಬಂದಿದೆ. ಆಯಿತು, ಕೈಕೊಳ್ಳಲಿ. ನಾನು ಎದುರಿಸಲು ಸಿದ್ಧ. (ಆದರೆ ಅದು ‘ಅಕ್ರಮ’ ಎಂದು ಒತ್ತಿ ಹೇಳಬಯಸುತ್ತೇನೆ!)
-ಸಿ.ಪಿ.ಕೆ., ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.