ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಹೆಚ್ಚು ತೆರಿಗೆ ವಿಧಿಸಿ ಎಂದು ಸಾಹಿತಿ ದೇ. ಜವರೇಗೌಡರು (ಪ್ರ. ವಾ. ಜುಲೈ 15) ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವುದು ಸರಿಯಾದ ಚಿಂತನೆ ಎಂದೆನಿಸುವುದಿಲ್ಲ. ಸರ್ಕಾರ ಹೆಚ್ಚು ತೆರಿಗೆ ವಿಧಿಸಿದರೆ ಶಾಲೆಗಳು ಹೆಚ್ಚಿನ ಹಣಕಾಸು ಹೊರೆಯನ್ನು ವಿದ್ಯಾರ್ಥಿಗಳಿಗೆ ವರ್ಗಾಯಿಸುತ್ತವೆ. ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಇದರ ಪರಿಣಾಮ ಬಡ ಹಾಗೂ ಮಧ್ಯಮವರ್ಗದ ಮಕ್ಕಳು ಆಂಗ್ಲ ಮಾಧ್ಯಮ ಕಲಿಕೆಯಿಂದ ದೂರ ಸರಿಯುವುದು ಅನಿವಾರ್ಯವಾಗುತ್ತದೆ. ಇಂಗ್ಲಿಷ್ ಕಲಿಯುವುದು ಒಂದು ವರ್ಗಕ್ಕೆ ಸೀಮಿತವಾಗುತ್ತದೆ. ಆಂಗ್ಲ ಶಾಲೆಗಳನ್ನು ನಿಯಂತ್ರಣದಲ್ಲಿಡಲು ಗೌಡರು ಬೇರೆ ಏನನ್ನಾದರೂ ಯೋಚಿಸಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.