ADVERTISEMENT

ನಂಬಿಕೆಗಳ ವಾಣಿಜ್ಯೀಕರಣ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2012, 19:30 IST
Last Updated 22 ಏಪ್ರಿಲ್ 2012, 19:30 IST

`ಅಕ್ಷಯ ತೃತೀಯ~ದಂದು ಚಿನ್ನ ಅಥವಾ ಆಸ್ತಿ ಕೊಳ್ಳಲು ಶುಭ ದಿನ ಎಂದು ಯಾವುದೇ ಹಿಂದೂ ಶಾಸ್ತ್ರ ಗ್ರಂಥಗಳಲ್ಲಿ ಹೇಳಿಲ್ಲ. ಅಂದು ಬಡ-ಬಗ್ಗರಿಗೆ ದಾನ ಮಾಡಿದವನು ಸ್ವರ್ಗಕ್ಕಿಂತ ಉನ್ನತ ಸ್ಥಾನ ಪಡೆಯುತ್ತಾನೆ ಎಂದು ಕೆಲ ಶಾಸ್ತ್ರಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಆ ದಿನ ಖರೀದಿಸಿದ ಚಿನ್ನ-ಬೆಳ್ಳಿ ಅಥವಾ ಬೇರೆ ಅಮೂಲ್ಯ ವಸ್ತುಗಳನ್ನು ದಾನ ಮಾಡದೇ ಮನೆಯಲ್ಲೇ ಇಟ್ಟುಕೊಂಡರೆ ಅದರಿಂದ `ಕ್ಷಯ~ ಉಂಟಾಗುತ್ತದೆ, ಅಂದರೆ ಕುಟುಂಬದ ಸಂಪತ್ತು ಕ್ಷೀಣಿಸುತ್ತಾ ಹೋಗುತ್ತದೆ ಎಂದು ಶಾಸ್ತ್ರ ಗ್ರಂಥಗಳಲ್ಲಿ ಹೇಳಲಾಗಿದೆ.

 ಚಿನ್ನದ ವ್ಯಾಪಾರಿಗಳು ವಿಶೇಷವಾಗಿ ಉತ್ತರ ಭಾರತೀಯರು ಶಾಸ್ತ್ರಗಳಲ್ಲಿ ಹೇಳಲಾದ ಸಂಗತಿಯನ್ನು ತಿರುಚಿ ತಮಗೆ ಲಾಭವಾಗುವಂತೆ ಮಾಡಿಕೊಂಡಿದ್ದಾರೆ. ಹಿಂದೂಗಳ ನಂಬಿಕೆಗಳನ್ನು ದುರುಪಯೋಗಪಡಿಸಿಕೊಂಡು ವಾಣಿಜ್ಯೀಕರಣಗೊಳಿಸುತ್ತಿದ್ದಾರೆ. ಇದನ್ನು ಪ್ರಜ್ಞಾವಂತರೆಲ್ಲರೂ ವಿರೋಧಿಸಬೇಕಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.