`ತಪ್ಪು ತಪ್ಪೇ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ' ಎಂದು ಪಾಟೀಲ ಪುಟ್ಟಪ್ಪನವರು (ಪ್ರ. ವಾ. ನ. 19) ತಮ್ಮ ದೊಡ್ಡತನ ಮೆರೆದಿದ್ದಾರೆ. ಅವರ ನಡೆ ನುಡಿ ಆದರ್ಶಪ್ರಾಯವಾದುದು. ಅವರು ನಾಡೋಜರೇ ಸರಿ.
`ಕನ್ನಡ ಮಾತನಾಡುವ ಎಲ್ಲ ಪ್ರದೇಶಗಳಲ್ಲಿನ ಪ್ರಭುತ್ವಗಳು ಅಳಿದು ಹೋದರೂ ಮೈಸೂರು ಪ್ರಭುತ್ವವು ಉಳಿದು ಕೊಂಡಿದ್ದಿತು' ಎಂದು ಪಾಪು ನೆನೆಪಿಸಿದ್ದಾರೆ: ಅದು ಇನ್ನೊಂದು ರೀತಿಯಲ್ಲಿ ರಾಜ ಪ್ರಮುಖರಾಗಿ, ಆ ಮೇಲೆ ರಾಜ್ಯಪಾಲರಾಗಿ ಇಲ್ಲಿ ಮುಂದುವರೆದಿತ್ತು. ನನಗೆ ತಿಳಿದಂತೆ, ಕರ್ನಾಟಕ ಸರ್ಕಾರ ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಕುವೆಂಪು ಅವರಿಗೆ `ರಾಷ್ಟ್ರಕವಿ' ಪ್ರಶಸ್ತಿ ನೀಡಲು ಮುಂದಾಯಿತು. ಆಗ ಕುವೆಂಪು ಕೆಲವು ಷರತ್ತುಗಳನ್ನು ಒಡ್ಡಿದರು.
ಅವುಗಳಲ್ಲಿ ಒಂದು: ರಾಜ್ಯಪಾಲರನ್ನು ಸಂವಿಧಾನಕ್ಕೆ ಅನುಸಾರವಾಗಿ ನೇಮಿಸಬೇಕು. ಕರ್ನಾಟಕ ಸರ್ಕಾರ ಅದರಂತೆ ನಡೆದುಕೊಂಡಿತು. ಇಲ್ಲಿ ರಾಜ್ಯಪಾಲರಾಗಿದ್ದ `ಮಹಾರಾಜ' ಜಯಚಾಮರಾಜ ಒಡೆಯರ್ ಅವರನ್ನು ಮದರಾಸ್ ರಾಜ್ಯಕ್ಕೆ ವರ್ಗಾಯಿಸಿದರು. ಆ ಮೇಲೆ ಕುವೆಂಪು `ರಾಷ್ಟ್ರ ಕವಿ' ಪ್ರಶಸ್ತಿ ಸ್ವೀಕರಿಸಿದರು. ಹೀಗೆ ಮೈಸೂರಿನಲ್ಲಿ ರಾಜಪ್ರಭುತ್ವ ಕೊನೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.