ADVERTISEMENT

ನಾಟಕೀಯ ಚಳವಳಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 19:30 IST
Last Updated 13 ಆಗಸ್ಟ್ 2012, 19:30 IST

ಯೋಗಗುರು ಕೋಟ್ಯಧಿಪತಿ ರಾಮದೇವ್ ಅವರು, ರಾಮಲೀಲಾ ಮೈದಾನದಲ್ಲಿ ನಡೆಸಿದ ಭ್ರಷ್ಟಾಚಾರ ವಿರೋಧಿ ಚಳವಳಿ ತೀರಾ ಹಾಸ್ಯಾಸ್ಪದವಾದುದು. ರಾಮದೇವ್ ಅವರು ಇದುವರೆಗೂ ಗಳಿಸಿರುವ ಮೂವತ್ತೇಳು ಕೋಟಿ ರೂ.ಗಳ ಆಸ್ತಿಯ ಬಗೆಗೆ, ಆದಾಯ ತೆರಿಗೆ ಇಲಾಖೆಯು ಜಾರಿ ಮಾಡಿರುವ ನೋಟಿಸ್‌ಗಳಿಗೆ ಉತ್ತರ ಹೇಳುವ ನೈತಿಕ ಶಕ್ತಿಯೇ ಅವರಿಗಿಲ್ಲ.

ಆ ಬಗೆಗೆ ಕೆಲವು ರಾಷ್ಟ್ರೀಯ ಮಾಧ್ಯಮದವರು ನಡೆಸಿರುವ ಸಂದರ್ಶನದಲ್ಲಿ ಅವರು ಎತ್ತಿದ ಪ್ರಶ್ನೆಗಳಿಗೆ ರಾಮದೇವ್ ನೀಡಿರುವುದು ತೀರಾ ನಗೆಪಾಟಲಿನ ಉತ್ತರಗಳು. ಈ ಹಿಂದಿನ ಚಳವಳಿಯನ್ನು ಭ್ರಷ್ಟ ವಿರೋಧಿ ಎಂದು ಕರೆದುಕೊಂಡ ರಾಮದೇವ್, ಆ ನಂತರದ ಚಳವಳಿಯನ್ನು ವಿದೇಶಗಳಲ್ಲಿರುವ ಕಪ್ಪು ಹಣದ ವಿರೋಧಿ ಚಳವಳಿ ಎಂದರು.

ಈಗಿನ ತಮ್ಮ ಚಳವಳಿ ಲೋಕಪಾಲ ಮಸೂದೆಯ ಸಲುವಾಗಿ ಎನ್ನುತ್ತಿದ್ದಾರೆ. ಅಂದರೆ, ಇವೆಲ್ಲಾ ರಾಮದೇವ್ ಅವರ ನಾಟಕೀಯ ಚಳವಳಿಗಳಲ್ಲದೆ ಬೇರೇನೂ ಅಲ್ಲವೆಂಬುದು ತುಂಬಾ ಸುಲಭವಾಗಿಯೇ ಅರ್ಥವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.