ADVERTISEMENT

ನಾಯಿ ಮತ್ತು ಬಾಲ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST

ನಾಯಿ ಯಾವಾಗಲೂ ತನ್ನ ಬಾಲವನ್ನು ಅಲ್ಲಾಡಿಸುತ್ತಿರುತ್ತದೆ. ಬಾಲವೇ ನಾಯಿಯನ್ನು ಅಲ್ಲಾಡಿಸಿದರೆ? 19 ಸಂಸತ್ ಸದಸ್ಯರನ್ನು ಹೊಂದಿದ ಟಿಎಂಸಿ ಹಲವು ಬಾರಿ 205 ಸದಸ್ಯರನ್ನು ಹೊಂದಿದ ಕಾಂಗ್ರೆಸ್ಸನ್ನು ಅಲುಗಾಡಿಸಿದ್ದಿದೆ. ಈ ಬಾರಿ ಕಾಂಗ್ರೆಸ್ ಅಲ್ಲಾಡಲಿಲ್ಲ.  ಅಷ್ಟೇ ಅಲ್ಲ ತಾನು ಏಕೆ ಅಲ್ಲಾಡಲಿಲ್ಲ ಎಂದು ಸ್ವತಃ ಪ್ರಧಾನಿಯೇ ದೇಶವನ್ನುದ್ದೇಶಿಸಿ ಭಾಷಣ ಮಾಡಿದರು.

ಬಹುಶಃ ಕಾಂಗ್ರೆಸ್ ಅಲ್ಲಾಡಲಿ. ಬೆಲೆಗಳು ಇಳಿಯಲಿ.. ಅಡುಗೆ ಅನಿಲದ ಮೇಲಿನ ಮಿತಿ ತೆಗೆದುಹಾಕಲಿ.. ಚಿಲ್ಲರೆ ಮಾರುಕಟ್ಟೆಯನ್ನು ವಿದೇಶಿಯರು ಆಕ್ರಮಿಸಿಕೊಳ್ಳದಿರಲಿ ಎಂದು ಜನ ಬಯಸಿದ್ದರು. 120 ಕೋಟಿ ಜನ ಎಂಬ ಬೃಹತ್ ಪ್ರಾಣಿಯನ್ನು, ಸರಕಾರ ಎಂಬ ಚಿಕ್ಕ ಬಾಲ ಅಲುಗಿಸಿಯೇ ಬಿಟ್ಟಿತಲ್ಲ?!  

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.