ADVERTISEMENT

ನಿರ್ವಾಹಕನ ವರ್ತನೆಗೆ ಕಡಿವಾಣ ಹಾಕಿರಿ

ರಾಮಕೃಷ್ಣ, ಸಿನಿಮಾ ವರ್ಕರ್ಸ್‌ ಯೂನಿಯನ್‌ ಪ್ರಧಾನ ಕಾರ್ಯದರ್ಶಿ.
Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST

ನಾನು 67 ವರ್ಷ ವಯಸ್ಸಿನ ಹಿರಿಯ ನಾಗರಿಕ. ಕರ್ತವ್ಯನಿಮಿತ್ತ ಪ್ರತಿ ದಿವಸ ಹಂಪಿನಗರದಿಂದ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ಬೆಳಿಗ್ಗೆ ಸಂಜೆ 11 ರೂಪಾಯಿ ಕೊಟ್ಟು ಟಿಕೆಟ್‌ ಪಡೆದು ಪ್ರಯಾಣಿಸುತ್ತೇನೆ. ದಿನಾಂಕ 18.9.13 ರಂದು ಬೆಳಿಗ್ಗೆ ಸುಮಾರು 10.30ರ ಸಮಯದಲ್ಲಿ, ಹಂಪಿ ನಗರದಿಂದ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ಹೊರಡುವ ಮಾರ್ಗಸಂಖ್ಯೆ 87 (ಬಸ್‌ ಸಂಖ್ಯೆ: ಕೆಎ–01–ಎಫ್‌ 3064; ಡಿಪೋ –16)ಕ್ಕೆ ಹತ್ತಿದೆ ನಾನು ಟಿಕೆಟ್‌ ಕೇಳಿದರೆ 11 ರೂ. ಬದಲಿಗೆ 12 ರೂ. ನೀಡುವಂತೆ ನಿರ್ವಾಹಕ ಕೇಳಿದರು.

ಅದಕ್ಕೆ ನಾನು ಯಾಕೆ ಎಂದು ಕೇಳಿದರೆ ನಿರ್ವಾಹಕ 12 ರೂ. ಕೊಡು ಇಲ್ಲ ಬಾಯಿ ಮುಚ್ಚಿಕೊಂಡು ಬಸ್‌ನಿಂದ ಇಳಿಯುವಂತೆ ಹೇಳಿದರು. ನಾನು ಆಗುವುದಿಲ್ಲ ಎಂದು ಹೇಳಿದ್ದಕ್ಕೆ ಕಪಾಳಕ್ಕೆ ಹೊಡೆಯುತ್ತೇನೆಂದರು. ಹಿರಿಯ ನಾಗರಿಕರಿಗೆ ಈ ರೀತಿ ಹೇಳುವುದು ಸರಿಯೆ? ನಿರ್ವಾಹಕರ ಈ ಅನಾಗರಿಕ ವರ್ತನೆಗೆ ಕೊನೆಯೆಂದು? ಕೂಡಲೆ ಬಿಎಂಟಿಸಿ ಮೇಲಧಿಕಾರಿಗಳು ಸ್ಟಷ್ಟೀಕರಣ ನೀಡಬೇಕೆಂದು ಮನವಿ.
–ರಾಮಕೃಷ್ಣ, ಸಿನಿಮಾ ವರ್ಕರ್ಸ್‌ ಯೂನಿಯನ್‌ ಪ್ರಧಾನ ಕಾರ್ಯದರ್ಶಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT