ADVERTISEMENT

ನಿವೇಶನಗಳಿಗೆ ನಂಬರುಗಳಿಲ್ಲ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 19:30 IST
Last Updated 16 ಏಪ್ರಿಲ್ 2012, 19:30 IST

ಸರ್ ಎಂ. ವಿಶ್ವೇಶ್ವರಯ್ಯನಗರ 3ನೇ ಬ್ಲಾಕ್ ಬಡಾವಣೆಯಲ್ಲಿ ಹಂಚಿಕೆಯಾದ ನಿವೇಶನಗಳು ನೋಂದಣಿ ಆಗಿ ಆರು ತಿಂಗಳಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕೆಲವು ನಿವೇಶನಗಳಿಗೆ ನಂಬರ್‌ಗಳನ್ನೇ ಹಾಕಿಲ್ಲದ್ದರಿಂದ ನಿವೇಶನದಾರರಿಗೆ ಗೊಂದಲವಾಗಿದೆ. ಮನೆಯನ್ನು ಕಟ್ಟಿಕೊಂಡು ಬರಬೇಕಾದರೆ ತಮ್ಮ ನಿವೇಶನ ನಂಬರ್ ಎಲ್ಲಿದೆ ಎಂದು ಹುಡುಕುವುದೇ ಅಸಾಧ್ಯವೆಂಬ ರೀತಿಯಲ್ಲಿ ಬಡಾವಣೆ ಇದೆ. ಪ್ರತಿಯೊಂದು ರಸ್ತೆಯಲ್ಲೂ ನಿವೇಶನದ ನಂಬರುಗಳುಳ್ಳ ಯಾವುದೇ ಬೋರ್ಡ್ ಕಾಣಿಸುವುದಿಲ್ಲ, ಯಾವ ರೀತಿ ನಿವೇಶನವನ್ನು ಹುಡುಕುವುದು ಎಂದು ಗೊತ್ತಾಗುವುದಿಲ್ಲ. ಸುಮಾರು ನಿವೇಶನಗಳಿಗೆ ನಂಬರುಗಳನ್ನು ಹಾಕಿಲ್ಲ. ಇದಕ್ಕೆ ಸಂಬಂಧಪಟ್ಟ ಆಯುಕ್ತರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕೂಡಲೇ ಗಮನಹರಿಸಿ, ಶೀಘ್ರವಾಗಿ ನಂಬರ್‌ಗಳನ್ನು ಹಾಕಿಕೊಡಬೇಕಾಗಿ ಕೋರುತ್ತೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.