ADVERTISEMENT

ನೌಕರರಲ್ಲಿ ತಾರತಮ್ಯ

​ಪ್ರಜಾವಾಣಿ ವಾರ್ತೆ
Published 29 ಮೇ 2018, 19:30 IST
Last Updated 29 ಮೇ 2018, 19:30 IST

ಹೈಕೋರ್ಟ್‌ನ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರ ವೇತನ ಶ್ರೇಣಿಯಲ್ಲೇ ವೇತನ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶವನ್ನು ಮೇ 29ರ ಸಂಜೆಯೊಳಗೆ ಅನುಷ್ಠಾನಗೊಳಿಸುವಂತೆ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ (ಪ್ರ.ವಾ., ಮೇ 29).

ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು ಆದೇಶ ಜಾರಿ ಕುರಿತು ಪ್ರಮಾಣ ಪತ್ರ ಸಲ್ಲಿಸಿದ್ದೂ ಆಗಿದೆ ಎಂದು ವರದಿಯಾಗಿದೆ. ಇದು ಸ್ವಾಗತಾರ್ಹ.

ಆದರೆ ಹೈಕೋರ್ಟ್ ನೌಕರರು ಯಾವ ರಾಜ್ಯದಲ್ಲಿ ಮತ್ತು ಯಾವ ಪ್ರದೇಶದ ಜನರಿಗಾಗಿ ಕೆಲಸ ಮಾಡುತ್ತಾರೆ? ಯಾವ ರಾಜ್ಯದ ಸರ್ಕಾರದಿಂದ ಇವರು ನೇಮಕಗೊಂಡರು ಮತ್ತು ಇವರಿಗೆ ಅನ್ವಯವಾಗುವುದು ಯಾವ ರಾಜ್ಯದ ನಿಯಮಗಳು? ಕರ್ನಾಟಕದಲ್ಲಿ ಕೆಲಸ ಮಾಡುವ ರಾಜ್ಯ ಸರ್ಕಾರದ ಇತರ ಸಿಬ್ಬಂದಿಗಿಂತ ಹೈಕೋರ್ಟಿನ ಸಿಬ್ಬಂದಿ ಹೇಗೆ ಭಿನ್ನರಾಗುತ್ತಾರೆ? ಅವರಿಗೆ ಕೇಂದ್ರ ಸರ್ಕಾರದ ಕಾರ್ಮಿಕ ನಿಯಮಾವಳಿಗಳು ಅನ್ವಯಿಸುತ್ತವೆಯೇ? ಕೇಂದ್ರ ಸರ್ಕಾರದ ನೌಕರರಂತೆ ಇವರಿಗೆ ದೇಶದೆಲ್ಲೆಡೆ ಆಗಾಗ ವರ್ಗಾವಣೆ ಇರುತ್ತದೆಯೇ?

ADVERTISEMENT

ಕೋರ್ಟ್‌ನ ಈ ಆದೇಶದಿಂದ ರಾಜ್ಯ ಸರ್ಕಾರದ ನೌಕರರಲ್ಲೇ ತಾರತಮ್ಯ ಮಾಡಿದಂತಾಗುವುದಿಲ್ಲವೇ? ಇತರೆ ಸಿಬ್ಬಂದಿಯ ಮನೋಸ್ಥೈರ್ಯ ಕುಗ್ಗಿ ಹೋಗುವುದಿಲ್ಲವೇ? ಸರ್ಕಾರ ಮತ್ತು ನ್ಯಾಯಾಲಯ ಈ ತಾರತಮ್ಯವನ್ನು ಮನಗಂಡು, ಆದಷ್ಟು ಶೀಘ್ರ ಸರಿಪಡಿಸಿ ನ್ಯಾಯ ಒದಗಿಸಬೇಕು. ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಕೂಡಲೇ ಹೋರಾಟ ಆರಂಭಿಸಬೇಕು.

– ಡಾ. ನಿತ್ಯಾನಂದ ಸುಂಡವಾಳು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.