ADVERTISEMENT

ನೌಕರಿ ವಯೋಮಿತಿ ಹೆಚ್ಚಿಸಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 19:30 IST
Last Updated 1 ಮಾರ್ಚ್ 2012, 19:30 IST

ಪಶ್ಚಿಮ ಬಂಗಾಳ ಮತ್ತು ಆಂಧ್ರದಲ್ಲಿ ಸರ್ಕಾರಿ ನೌಕರಿಗೆ ಸೇರುವವರ ವಯೋಮಿತಿ ಜನವರಿ 2012 ರಿಂದ ಹೆಚ್ಚಳ ಮಾಡಿವೆ. ಪಶ್ಚಿಮ ಬಂಗಾಳದಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 37 ರಿಂದ 40 ವರ್ಷ, ಪ.ಜಾತಿ ಮತ್ತು ಪಂಗಡದವರಿಗೆ 40 ರಿಂದ 43 ವರ್ಷಕ್ಕೆ ಏರಿಸಲಾಗಿದೆ.

ಆಂಧ್ರದಲ್ಲಿ ಸಾಮಾನ್ಯ ವರ್ಗದವರಿಗೆ 34 ರಿಂದ 36, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 39 ರಿಂದ 41 ವರ್ಷಕ್ಕೆ ಏರಿಕೆ ಮಾಡಲಾಗಿದೆ. ಆದರೆ ಕರ್ನಾಟಕದ ಬಿಜೆಪಿ ಸರ್ಕಾರ ನಿವೃತ್ತಿ ವಯೋಮಿತಿಯನ್ನಷ್ಟೇ ಹೆಚ್ಚಿಸಿ, ನಿರುದ್ಯೋಗಿಗಳನ್ನು ಕಡೆಗಣಿಸಿದೆ.

ಕರ್ನಾಟಕ ಸರ್ಕಾರವೂ ಪಶ್ಚಿಮ ಬಂಗಾಳ ಮತ್ತು ಆಂಧ್ರ ಪ್ರದೇಶ ಸರ್ಕಾರಗಳ ಮಾದರಿಯಲ್ಲಿ  ಸರ್ಕಾರಿ ನೌಕರಿ ವಯೋಮಿತಿ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.