ADVERTISEMENT

ನ್ಯಾಯಬೆಲೆ ಅಂಗಡಿ ಮಾಲೀಕತ್ವ ಬದಲಾಗಲಿ

ಡಾ.ಅಂಬಣ್ಣ ಮ.ಢವಳಾರ, ಸಿಂದಗಿ
Published 25 ಆಗಸ್ಟ್ 2013, 19:59 IST
Last Updated 25 ಆಗಸ್ಟ್ 2013, 19:59 IST

ಬಡಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಸರ್ಕಾರವು ಹಳ್ಳಿ, ನಗರ, ಪಟ್ಟಣಗಳಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ಆರಂಭಿಸಿದರೂ ಪ್ರಸ್ತುತ ಈ ನ್ಯಾಯಬೆಲೆ ಅಂಗಡಿಗಳು ವಿವಿಧ ಪಕ್ಷಗಳೊಂದಿಗೆ ಗುರುತಿಸಿಕೊಂಡ ಪುಢಾರಿಗಳ ಕೈಯಲ್ಲಿ ಸಿಲುಕಿ ರಾಜಕೀಯ ಚಟುವಟಿಕೆಗಳ ಕೇಂದ್ರ ಸ್ಥಳಗಳಾಗಿ ಮಾರ್ಪಟ್ಟಿವೆ. ನ್ಯಾಯಬೆಲೆ ಅಂಗಡಿಗಳ ಮಾಲೀಕತ್ವಕ್ಕಾಗಿ ರಾಜ್ಯದ ಅನೇಕ ಹಳ್ಳಿಗಳಲ್ಲಿ ಹೊಡೆದಾಟ,ಬಡಿದಾಟಗಳು ನಡೆದಿವೆ.

ಬಡತನ ರೇಖೆಯ ಕೆಳಗಿನ ಜನರಿಗೆ ಸರಿಯಾಗಿ ಆಹಾರಧಾನ್ಯ, ಸಕ್ಕರೆ, ಸೀಮೆಎಣ್ಣೆ ಮುಂತಾದ ಜೀವನಾವಶ್ಯಕ ವಸ್ತುಗಳು ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ. ಸರ್ಕಾರ ನಿಗದಿಪಡಿಸಿದ ದರಗಳಲ್ಲಿ ಬಡಜನರಿಗೆ ಲಭ್ಯವಾಗುತ್ತಿಲ್ಲ.  ಈಗ ನ್ಯಾಯಬೆಲೆ ಅಂಗಡಿಗಳ ಮಾಲೀಕರಾಗಲು ಯಾವ ಅರ್ಹತೆಗಳೂ ಬೇಕಾಗಿಲ್ಲ. ಪ್ರತೀ ತಾಲ್ಲೂಕಿನಲ್ಲೂ ಯಾವ ಪಕ್ಷದ ಮತ್ತು ಯಾವ ಜಾತಿಯ ಶಾಸಕರು ಆಯ್ಕೆಯಾಗುತ್ತಾರೋ ಆ ಪಕ್ಷದ ಕಾರ್ಯಕರ್ತರು ಅಥವಾ ಅವರ ಜಾತಿಯವರು ನ್ಯಾಯಬೆಲೆ ಅಂಗಡಿಗಳ ಮಾಲೀಕರಾಗಿ ನಿಯೋಜನೆಗೊಳ್ಳುತ್ತಾರೆ.

ಕನಿಷ್ಠ ಎಸ್.ಎಸ್.ಎಲ್.ಸಿ  ಅರ್ಹತೆಯ ಆಧಾರ ಹಾಗೂ ವಯಸ್ಸಿನ ಜೇಷ್ಠತೆಯ ಆಧಾರದ ಮೇಲೆ ನಿರುದ್ಯೋಗಿಗಳಿಗೆ ನ್ಯಾಯಬೆಲೆ ಅಂಗಡಿ ಒದಗಿಸಬೇಕು.
-ಡಾ. ಅಂಬಣ್ಣ ಮ. ಢವಳಾರ, ಸಿಂದಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.