ADVERTISEMENT

ನ್ಯಾ. ಶಿವರಾಜ ಪಾಟೀಲ್ ಮೇಲ್ಪಂಕ್ತಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 19:30 IST
Last Updated 20 ಸೆಪ್ಟೆಂಬರ್ 2011, 19:30 IST

ನಿವೇಶನದ ವಿಷಯದಲ್ಲಿ ಬಂದ ಟೀಕೆಗಳಿಂದ ಮನನೊಂದ ನ್ಯಾ. ಶಿವರಾಜ ಪಾಟೀಲ್ ಅವರು ರಾಜೀನಾಮೆ ನೀಡಿದ್ದಾರೆ.  ಅವರು ಹೊಂದಿದ್ದ ನಿವೇಶನಗಳ ನಿಯಮ ಕುರಿತ ಸರಿ ತಪ್ಪುಗಳ ಚರ್ಚೆ ಏನೇ ಇರಲಿ, ನ್ಯಾಯಾಂಗದ ಸೇವೆಯಲ್ಲಿರುವವರಿಗೆ ಒಂದು ಮೇಲ್ಪಂಕ್ತಿ ಹಾಕುವುದರ ಜೊತೆಗೆ ಸ್ಪಷ್ಟ ಸಂದೇಶವನ್ನೂ ಕಳುಹಿಸಿದ್ದಾರೆ.

ಅಧಿಕಾರಕ್ಕೆ ಅಂಟಿ ಕೂರಬಯಸದೇ, ನಿರ್ಗಮಿಸಿರುವುದು ಶ್ಲಾಘನೀಯವಾದರೂ, ಇಂತಹ ಅತೀ ಸಣ್ಣ ಸಣ್ಣ ಸಂಗತಿಗಳನ್ನೂ ವಿಶ್ಲೇಷಿಸುತ್ತ ಹೋದರೆ, ಶುದ್ಧಹಸ್ತರೆನಿಸಿಕೊಂಡವರನ್ನು ತರುವುದೆಲ್ಲಿಂದ? 

ಅವರ ಸುದೀರ್ಘ ಸೇವಾವಧಿಯಲ್ಲಿ ಭ್ರಷ್ಟರಾಗಿದ್ದ ಬಗ್ಗೆ ಎಲ್ಲಿಯೂ ಮಾಹಿತಿ ಲಭ್ಯವಾಗಿಲ್ಲ. ಒಟ್ಟಾರೆ ಈ ಬೆಳವಣಿಗೆಗಳು ಭ್ರಷ್ಟರನ್ನು ವಿರೋಧಿಸುತ್ತಿವೆಯೋ, ಭ್ರಷ್ಟಾಚಾರವನ್ನು ನಿಯಂತ್ರಿಸಬಯಸುವವರನ್ನೇ ವಿರೋಧಿಸುತ್ತಿವೆಯೋ ತಿಳಿಯದಾಗಿದೆ.

ಆದರೆ ಒಂದಂತೂ ಸತ್ಯ, ಮುಂದಿನ ದಿನಗಳಲ್ಲಿ ಅಪರಂಜಿ ಬಂಗಾರದಂತಹ ನಡೆನುಡಿಗಳನ್ನು ನ್ಯಾಯಾಧೀಶರಾಗಬಯಸುವವರು ಹೊಂದಲೇಬೇಕಾದ ಅನಿವಾರ‌್ಯತೆಯನ್ನಂತೂ ನ್ಯಾ. ಶಿವರಾಜ ಪಾಟೀಲ ಅವರು ಸೃಷ್ಟಿಸಿ ನಿರ್ಗಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.