ADVERTISEMENT

ಪರಿಷತ್ತಿಗೆ ಸರ್ಕಾರಿ ಪೋಷಣೆ ಬೇಕೆ?

ಎಚ್.ಎಸ್.ಮಂಜುನಾಥ
Published 7 ಜನವರಿ 2014, 19:30 IST
Last Updated 7 ಜನವರಿ 2014, 19:30 IST

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ‘ಸರ್ಕಾರ ಪರಿಷತ್ತನ್ನು ನಿರ್ಲಕ್ಷಿಸಿದೆ, ಬೀಗ ಹಾಕಿ ಬಿಡಿ’ ಎಂದವರು (ಡಿ. 15) ಮುಂದೆ ‘ಪರಿಷ­ತ್ತಿಗೆ ಸ್ಥಾನಮಾನ, ಅನುದಾನ ನೀಡು­ವುದು ಸರ್ಕಾರದ ಕರ್ತವ್ಯ. ಬೀಗ ಹಾಕಿ ಸುಮ್ಮನೆ ಹೋಗದೆ ನಿರಶನ ನಡೆಸುತ್ತೇನೆ’ ಎಂದರು (ಡಿ. 23).

ಇದು ಒಂದು ಬಗೆಯ ಟ್ರೇಡ್‌ ಯೂನಿ­ಯನ್‌ ಶೈಲಿಯ ಮಾರ್ಗ (ಅವರು ಹಿಂದೆ ಆ ಬಗೆಯ ಸಂಘಟನೆ­ಯಲ್ಲಿದ್ದವರಲ್ಲವೇ!) ರಾಜ್ಯ ಸರ್ಕಾ­ರದ  ವಾರ್ಷಿಕ ಬಜೆಟ್‌ನಲ್ಲಿ ಕಸಾಪ ತಾಲ್ಲೂಕು, ಜಿಲ್ಲಾ ಘಟಕಗಳಿಗೆ ಹಣ ನೀಡು­ತ್ತಿ­ರು­ವುದೇ ಸರಿ ಕಾಣದು. ಶತಮಾನೋತ್ಸವ ಸಂಭ್ರ­ಮಕ್ಕೆ  ₨ 7 ಕೋಟಿ  ವ್ಯಯಿಸುವ ಬದಲು ನಿಘಂಟು ನಿರ್ಮಾಣದಂತಹ ದೀರ್ಘ­ಕಾಲಿಕ ಉಪಯುಕ್ತದ ಕೆಲಸಗಳನ್ನು ಹಮ್ಮಿ
ಕೊ­ಳ್ಳುವುದು ಸೂಕ್ತ.

ಕನ್ನಡವನ್ನು ಕೇವಲ ಕಟ್ಟಡಗಳಿಂದ ಕಟ್ಟಲಾ­ಗದು, ವಿವಿಧ ಪ್ರಶಸ್ತಿ ಪಡೆದವರಿಗೆ ಸನ್ಮಾನ ಏರ್ಪ­­ಡಿ­ ಸುವುದರಿಂದಲೂ ಅಲ್ಲ. ಮುಂದಿನ ಏಳೆಂಟು ವರ್ಷಗಳಲ್ಲಿ ವಿವಿಧ ವಿಷಯ, ಕ್ಷೇತ್ರ­ಗಳಲ್ಲಿ ಅದನ್ನು ಸಜ್ಜು, ಸಶಕ್ತಗೊಳಿಸುವುದರಿಂದ ಸಾಧ್ಯ.

ನನಗೆ ನಾ. ಡಿಸೋಜ ಅವರ ಬರಹ, ಸರಳತೆಗಳು ಮೆಚ್ಚುಗೆಯೆನಿಸಿದರೂ ಸಾಹಿತ್ಯ ಪರಿಷತ್ತು ಸೂಕ್ತ ಆದ್ಯತೆಗಳನ್ನು ಗುರುತಿಸಿಕೊಳ್ಳಬೇಕೆಂದು ಅವರು ಆಗ್ರಹಿಸುತ್ತಾರೆಯೇ ಎಂಬುದರ ಬಗೆಗೆ ಸಂದೇಹವಿದೆ.

‘ಸಮ್ಮೇಳನವನ್ನು ಎರಡು ವರ್ಷಕ್ಕೊಮ್ಮೆ ನಡೆಸಿದರೆ ಸಾಕು’ ಎಂಬ ಹಾಲಂಬಿ ಅವರ ಅಭಿಪ್ರಾಯದ ಬಗೆಗೆ ಸರ್ವಾನುಮತ ಮೂಡೀತೆ? ಜನ ಬೆಂಬಲವೆಂಬ ಬೇರು ಕ್ಷೀಣಿಸಿ, ಸರ್ಕಾರಿ ಪೋಷಣೆಯೆಂಬ ಬಿಳಲಿನ ಮೇಲೆ ಪರಿಷತ್ತು ನಿಲ್ಲುವುದು ಆರೋಗ್ಯಕರ ಬೆಳವಣಿಗೆ ಸಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.