ADVERTISEMENT

ಪಶು ಚಿಕಿತ್ಸೆ: ಆಧುನಿಕ ಸೌಲಭ್ಯ ಬೇಕು

​ಪ್ರಜಾವಾಣಿ ವಾರ್ತೆ
Published 7 ಮೇ 2012, 19:30 IST
Last Updated 7 ಮೇ 2012, 19:30 IST

ಆಧುನಿಕ ಮತ್ತು ಸಾಂಪ್ರದಾಯಿಕ ಪದ್ಧತಿಯಲ್ಲಿ ಬೇಸಾಯ ಮಾಡುವ ರೈತರು ದನಕರುಗಳನ್ನು ಸಾಕಿರುತ್ತಾರೆ. ಹೈನುಗಾರಿಕೆ ಇತ್ತೀಚಿನ ವರ್ಷಗಳಲ್ಲಿ ಬೇಸಾಯಕ್ಕಿಂತ ಹೆಚ್ಚು ಜನಪ್ರಿಯವಾಗುತ್ತಿದೆ. ಮಿಶ್ರ ತಳಿಯ ಹಸುಗಳು ಸಾಕಣೆ ಕಷ್ಟ.

ಬಹುತೇಕ ಹೈನುಗಾರರು ಆಲೋಪತಿ ಪಶುವೈದ್ಯರನ್ನೇ ಅವಲಂಬಿಸಿದ್ದಾರೆ. ಹೃದಯಾಘಾತ, ಮೂತ್ರಪಿಂಡ ವೈಫಲ್ಯ,ಉಸಿರಾಟದ ತೊಂದರೆಯಿಂದ ನರಳುವ ಹಸು, ಎಮ್ಮೆಗಳಿಗೆ ಈಗ ಶಸ್ತ್ರಚಿಕಿತ್ಸೆ ಮಾಡುವ ಪದ್ಧತಿ ಇದೆ.

ಆದರೆ ಅದನ್ನು ನಿರ್ಧರಿಸಲು ಎಕ್ಸ್‌ರೇ ಯಂತ್ರಗಳ ಅಗತ್ಯವಿದೆ. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಚಿಕಿತ್ಸಾ ವ್ಯವಸ್ಥೆ ಇರಬೇಕು. ಸರ್ಕಾರ ಈ ನಿಟ್ಟಿನಲ್ಲಿ ಆಲೋಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.