ADVERTISEMENT

ಪಾಠ ಕಲಿಯಬೇಕು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 20:21 IST
Last Updated 27 ಡಿಸೆಂಬರ್ 2017, 20:21 IST

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಮೂರು ದಿನಗಳಲ್ಲಿ ಎರಡು ದೇವಾಲಯ, ಒಂದು ದರ್ಗಾಕ್ಕೆ ಭೇಟಿ ನೀಡಿದ್ದು ವರದಿಯಾಗಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಗುಜರಾತ್‌ನಲ್ಲಿ ಚುನಾವಣೆಗೂ ಮುನ್ನ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ್ದರ ಅನುಸರಣೆ ಇದಾಗಿರಬೇಕು! ಆದರೆ ಈ ಬೆಳವಣಿಗೆ, ಸಾಮಾಜಿಕ ಆರೋಗ್ಯಕ್ಕೆ ಒಳ್ಳೆಯದೆನಿಸುವುದಿಲ್ಲ.

ಅಲ್ಪಸಂಖ್ಯಾತರ ಮುದ್ದಿಗಾಗಿ, ಮಸೀದಿ, ಚರ್ಚ್‌ಗಳ ಭೇಟಿ, ಇಫ್ತಾರ್ ಕೂಟಗಳೇನೋ ಕಾಂಗ್ರೆಸ್ ಸಂಪ್ರದಾಯವೇ, ಆದರೆ ಆ ಮಂತ್ರ (ತಂತ್ರ?), ಹಿಂದುತ್ವದ ವಿಚಾರದಲ್ಲಿ ಪ್ರಯೋಜನಕ್ಕೆ ಬರುವಂಥದ್ದಲ್ಲ. ಬದಲಿಗೆ ಅನಾಹುತಕಾರಿಯೇ ಆದೀತು. ‘ಹಿಂದುತ್ವ’ವೆನ್ನುವುದು ಎಂದಿಗೂ ಖಂಡ- ತುಂಡವೇ ಹೊರತು ಅಖಂಡವಲ್ಲ. ಜಾತಿ ಆಂದೋಲನಗಳು ಇದಕ್ಕೆ ಸಾಕ್ಷಿ. ಕಾಂಗ್ರೆಸ್ ಸಹ ಆ ಜಾಡನ್ನು ಅನುಸರಿಸಹೋಗುವುದು ವಿವೇಕವಲ್ಲ. ಬದಲಿಗೆ, ಹುಸಿತನವನ್ನು ಎತ್ತಿತೋರಿಸುವ ಅವಕಾಶವಾಗಿ ಇದನ್ನು ಬಳಸಿಕೊಂಡರೆ, ಪಕ್ಷಕ್ಕೆ ಒಳಿತಾಗುತ್ತದೆ.

–ಆರ್. ಕೆ. ದಿವಾಕರ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.