

ನಗರದಲ್ಲಿ ಪಾದಚಾರಿ ರಸ್ತೆಯನ್ನು ಬಳಸಿಕೊಂಡವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ತೆರವುಗೊಳಿಸಿ ಎಂದು ಬಿಬಿಎಂಪಿಗೆ ನ್ಯಾಯಾಲಯ ಆದೇಶ ನೀಡಿದೆ. ಮುಖ್ಯಮಂತ್ರಿಯವರ ಗೃಹ ಕಚೇರಿಯಿಂದ ಶಿವಾನಂದ ಸರ್ಕಲ್ ರಸ್ತೆಯಲ್ಲಿ ಗಾಂಧಿಭವನದ ಎದುರು ರಸ್ತೆಯಲ್ಲಿ (ಭಾರತ್ ಸೇವಾದಳ ಸಮೀಪ) ಪಾದಚಾರಿ ರಸ್ತೆಯನ್ನೇ ಬಳಸಿ ಒಂದು ವಾಸದ ಮನೆಗೆ ಎರಡು ರಸ್ತೆ ಹಾಗೂ ಒಂದು ವಾಣಿಜ್ಯ ಕಟ್ಟಡಕ್ಕೆ ಒಂದು ರಸ್ತೆಯನ್ನು ಮಾಡಿಕೊಂಡಿದ್ದಾರೆ. ಈ ರಸ್ತೆಯಲ್ಲಿ ಪಾದಚಾರಿಗಳು ಸಂಚರಿಸುವಾಗ ಮೂರೂ ಸ್ಥಳಗಳಲ್ಲಿ ಪಾದಚಾರಿ ರಸ್ತೆ ಬಿಟ್ಟು ವಿಪರೀತ ವಾಹನಗಳು ಓಡಾಡುವ ರಸ್ತೆಗೆ ಇಳಿಯಲೇಬೇಕು. ಇದು ಯಾವೊಬ್ಬ ನಗರಪಾಲಿಕೆ ಅಧಿಕಾರಿಗೂ ಕಂಡಿಲ್ಲವೇ? ಪಾದಚಾರಿ ರಸ್ತೆ ನವೀಕರಣ ಮಾಡುವಾಗಲೂ ಈ ಅಕ್ರಮವನ್ನು ನೋಡಿಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.