ADVERTISEMENT

ಪಿಯು ಉಪನ್ಯಾಸಕರ ಹುದ್ದೆಗೆ ಬಿ.ಇಡಿ ಅವಶ್ಯ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 19:30 IST
Last Updated 22 ಸೆಪ್ಟೆಂಬರ್ 2011, 19:30 IST

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯ ಕಾರ್ಯದರ್ಶಿ ಜಿ. ಕುಮಾರನಾಯಕ್ ಅವರು, ಪಿಯು ಉಪನ್ಯಾಸಕರ ಹುದ್ದೆಗೆ ಬಿ.ಇಡಿ ಕಡ್ಡಾಯ ಅರ್ಹತೆಯನ್ನಾಗಿ ಮಾಡಿರುವ ಬಗೆಗೆ ಪ್ರತಿಕ್ರಯಿಸಿರುವುದು ವೈಜ್ಞಾನಿಕವಾಗಿ ಸ್ಪಷ್ಟವಾಗಿರುತ್ತದೆ (ಪ್ರವಾ ಸೆ. 18).

ರಾಷ್ಟ್ರೀಯ ಶಾಲಾ ಶಿಕ್ಷಣ ನೀತಿ ಅನುಮೋದಿಸಿರುವ 12 ವರ್ಷಗಳ ಶಾಲಾ ತರಗತಿಗಳ ಏಣಿ ಕ್ರಮ ರಚನೆಯ ಸ್ವರೂಪ 5+3+2+2 ಇದ್ದು, ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಸ್ನಾತಕೋತ್ತರ ಪದವಿ ಜೊತೆಗೆ ಬಿ.ಇಡಿ. ಪದವಿ ನಿಗದಿಪಡಿಸಿರುವುದು ಸೂಕ್ತವಾದ ಕ್ರಮ. ಕೇವಲ ಸ್ನಾತಕೋತ್ತರ ಪದವಿ ಪಡೆದ ಮಾತ್ರಕ್ಕೆ ಬೋಧನೆಗೆ ಸಂಬಂಧಿಸಿದ ಕೌಶಲಗಳು ಕರಗತವಾಗಿರುವುದಿಲ್ಲ.

 ನಾವು ಪಿ.ಯು ಫಲಿತಾಂಶವನ್ನು ಗಮನಿಸಿದರೆ ಕೇವಲ ಶೇ 40 ರಿಂದ 50ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದು, ಅನುತ್ತೀರ್ಣಗೊಂಡ ಕೆಲವು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಡುತ್ತಿದ್ದಾರೆ.

ಉಪನ್ಯಾಸಕರ ಹುದ್ದೆಗೆ ಈಗ ಇರುವ ವಿದ್ಯಾರ್ಹತೆ ಅವೈಜ್ಞಾನಿಕ ಕ್ರಮ ಎಂದು ಹಲವರು ಹೇಳುತ್ತಿದ್ದಾರೆ. ಹೀಗೆ ಹೇಳುವ ಮೂಲಕ ಪ್ರೌಢ ಶಾಲಾ ಶಿಕ್ಷಕರಿಗೂ ಪದವಿ ಕಾಲೇಜು ಉಪನ್ಯಾಸಕರ ಮಧ್ಯೆ ತಾರತಮ್ಯ ವ್ಯಕ್ತಪಡಿಸುತ್ತಿದ್ದಾರೆ.

ಸ್ನಾತಕೋತ್ತರ ಪದವಿ ಜೊತೆಗೆ M.Phil., Phd., NET ಅಥವಾ SLET ಪಾಸಾದವರಿಗೆ ಆದ್ಯತೆ ನೀಡಬೇಕು ಎಂದಿರುವ ಇವರು ಬೋಧನಾ ವಿಧಾನ ಹಾಗೂ ಮಕ್ಕಳ ಮನಃಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಬಿ.ಇಡಿ. ವಿದ್ಯಾರ್ಹತೆಯನ್ನು ಹೊಂದಿರುವವರ ಅಗತ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.