ADVERTISEMENT

ಪುಢಾರಿಗಳನ್ನೇ ನೇಮಿಸಿ!

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 19:30 IST
Last Updated 5 ಅಕ್ಟೋಬರ್ 2017, 19:30 IST

ರಾಜ್ಯದ ಹಲವು ವಿಶ್ವವಿದ್ಯಾಲಯಗಳಲ್ಲಿ ಹತ್ತಾರು ತಿಂಗಳುಗಳಿಂದ ಕುಲಪತಿ ಹುದ್ದೆಯನ್ನು ‘ಪ್ರಭಾರಿ’ಗಳೇ ನಿರ್ವಹಿಸುತ್ತಿದ್ದಾರೆ. ಅರ್ಹ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಅಧಿಕಾರ ನೀಡಲು ಇಷ್ಟೊಂದು ದಿನಗಳು ಬೇಕೆಂದರೆ ರಾಜ್ಯದಲ್ಲಿ ಉನ್ನತ ಶಿಕ್ಷಣದ ಸ್ಥಿತಿ ಹೇಗಿದೆ ಎಂದು ಅರ್ಥವಾಗುತ್ತದೆ.

ಶೋಧನಾ ಸಮಿತಿ ಸೂಚಿಸಿದ ಹೆಸರನ್ನು ತಿರಸ್ಕರಿಸುವ ರಾಜ್ಯಪಾಲರು ಶೀಘ್ರದಲ್ಲೇ ಇನ್ನೊಬ್ಬರ ನೇಮಕಕ್ಕಾದರೂ ಕ್ರಮ ಕೈಗೊಳ್ಳಬೇಡವೇ? ಶೋಧನಾ ಸಮಿತಿ ಸೂಚಿಸಿದವರಲ್ಲಿ ಕುಲಪತಿಯಾಗುವ ಅರ್ಹತೆ ಇಲ್ಲವೆಂದಾದರೆ ರಾಜ್ಯಪಾಲರು ತಮ್ಮ ರಾಜಕೀಯ ಅನುಭವವನ್ನು ಬಳಸಿ ರಾಜಕೀಯ ವ್ಯಕ್ತಿಗಳನ್ನಾದರೂ ಈ ಹುದ್ದೆಗಳಿಗೆ ನೇಮಕ ಮಾಡಲಿ. ಅವರಾದರೂ ರಾಜ್ಯಪಾಲರು ಹೇಳಿದಂತೆ ಅಧಿಕಾರ ಚಲಾಯಿಸುವರೇನೋ?

–ಮಹದೇವಪ್ಪ ಪಿ., ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.