ADVERTISEMENT

ಪ್ರತಿಷ್ಠೆ ಬಿಡಬೇಕು

ಡಾ.ಈಶ್ವರ ಶಾಸ್ತ್ರಿ ಮೋಟಿನಸರ
Published 26 ಡಿಸೆಂಬರ್ 2017, 19:30 IST
Last Updated 26 ಡಿಸೆಂಬರ್ 2017, 19:30 IST

‘ಶಾಲಾಬ್ಯಾಗಿನ ಹೊರೆ ತಗ್ಗುವುದೆಂದು?’ ಲೇಖನದಲ್ಲಿ ಪಿ.ಪಿ. ಬಾಬುರಾಜ್‌ ಅವರು ತಾವೇ ಶಾಲಾಬ್ಯಾಗ್ ಹೊತ್ತುಕೊಂಡವರ ಹಾಗೆ ಸಂಕಟಪಟ್ಟಿದ್ದಾರೆ (ಪ್ರ.ವಾ., ಸಂಗತ, ಡಿ. 26). ಅವರಿಗೆ ಗೊತ್ತಿರಲಿಕ್ಕಿಲ್ಲ, ಮಕ್ಕಳಲ್ಲಿ ಬಹುತೇಕರು ಸ್ಕೂಲ್ ಬ್ಯಾಗ್ ಹೊರುವುದಿಲ್ಲ ಎಂಬುದನ್ನು.

ಶಾಲಾಬ್ಯಾಗ್‌ ಹೊರುವುದು ಶಾಲೆಯ ವಾಹನ. ಅದಿಲ್ಲದಿದ್ದರೆ, ತುಂಬಿತುಳುಕುವ ಮಾರುತಿ ಓಮ್ನಿ, ಪುಷ್ಪಕ ವಿಮಾನದಂತಹ ಆಟೊರಿಕ್ಷಾ, ಅಮ್ಮನ ಸ್ಕೂಟಿ, ಅಪ್ಪನ ಬೈಕ್‌, ಅಜ್ಜನ ಕಾರು... ಇವುಗಳು ಬ್ಯಾಗನ್ನು ಹೊರುತ್ತವೆ.

ಇವು ಯಾವೂ ಇಲ್ಲದೇ ಇದ್ದಾಗ ಅಮ್ಮನೇ ಇವೆಲ್ಲವೂ ಆಗಿ ಬ್ಯಾಗ್ ಹೊರುತ್ತಾಳೆ. ಮಗನೋ ಮಗಳೋ ಕೈ ಬೀಸಿಕೊಂಡು ಕುಣಿ ಕುಣಿದು ಆಟಾ ಆಡುತ್ತಾ ಹೋಗುತ್ತಿರುತ್ತಾರೆ. ಸಂಜೆ ಟ್ಯೂಷನ್‌ಗೂ ತಂದೆ, ತಾಯಿಯೇ ವಾಹನ.

ADVERTISEMENT

ಮಗುವಿನ ಬ್ಯಾಗು ದೊಡ್ಡದಾದಷ್ಟೂ ಶಾಲೆಯ ಪ್ರತಿಷ್ಠೆ ಹೆಚ್ಚಾಗುತ್ತದೆ. ನಮ್ಮ ಪ್ರತಿಷ್ಠೆಯನ್ನು ಬಿಟ್ಟು ಮಕ್ಕಳನ್ನು ಸನಿಹದ ಸರ್ಕಾರಿ ಶಾಲೆಗೆ ಹಾಕಿದರೆ ಬ್ಯಾಗ್‌ನ ಭಾರ ಕಡಿಮೆಯಾಗದಿದ್ದರೂ ಬ್ಯಾಗನ್ನು ಹೊರುವ ದೂರವಾದರೂ ಕಡಿಮೆಯಾಗಬಹುದು.

ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಇಂಗ್ಲಿಷನ್ನು ಪ್ರಾಮಾಣಿಕವಾಗಿ, ಯೋಗ್ಯ ರೀತಿಯಿಂದ ಕಲಿಸುವುದರಿಂದ ಮಾತ್ರ ಮಕ್ಕಳನ್ನು ಸರ್ಕಾರಿ ಶಾಲೆಗೆ ಕರೆತರಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.