ADVERTISEMENT

ಪ್ರಮಾಣಪತ್ರಗಳ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 16:10 IST
Last Updated 15 ಫೆಬ್ರುವರಿ 2011, 16:10 IST

ನಾನೊಬ್ಬ ಬಿ.ಇಡಿ. ಪದವೀಧರನಾಗಿದ್ದು. ನನ್ನ ಮನವಿಯೇನೆಂದರೆ ಮೊದಲೇ ನಿರುದ್ಯೋಗಿಯಾಗಿದ್ದೇನೆ. ಆಗೊಮ್ಮೆ ಈಗೊಮ್ಮೆ ಸರ್ಕಾರ ಹುದ್ದೆಗಳ ಭರ್ತಿಯಾಗಿ ಅರ್ಜಿ ಆಹ್ವಾನಿಸುತ್ತದೆ. ಪ್ರತಿ ಬಾರಿ ಅರ್ಜಿ ಆಹ್ವಾನಿಸಿದಾಗಲೂ, ಹೊಸದಾಗಿ ಕನ್ನಡ ಮಾಧ್ಯಮ ಪ್ರಮಾಣ ಪತ್ರ. ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ. ಜಾತಿ ಪ್ರಮಾಣ ಪತ್ರ. ಅಂಗವಿಕಲ ಪ್ರಮಾಣ ಪತ್ರ ಮಾಡಿಸಬೇಕು. ಏಕೆ?

ಇದರಲ್ಲಿ ಯಾವುದೇ ಜಾತಿಯಾಗಲಿ, ಮಾಧ್ಯಮವಾಗಲಿ ಬದಲಾಗುವುದಿಲ್ಲ, ಅಂದಮೇಲೆ ಪ್ರತಿಬಾರಿಯೂ ಮತ್ತೆ ಪ್ರಮಾಣ ಪತ್ರವನ್ನೇಕೆ ಮಾಡಿಸಬೇಕು. ಹೊಸದಾಗಿ ಪ್ರಮಾಣ ಪತ್ರ ಮಾಡಿಸಿಲ್ಲ ಎನ್ನುವ ಕಾರಣಕ್ಕೆ ಎಷ್ಟೋ ಅವಕಾಶಗಳು ಕೈ ತಪ್ಪಿಹೋಗಿವೆ.
ಇದು ಕೇವಲ ನನ್ನೊಬ್ಬನ ಸಮಸ್ಯೆಯಲ್ಲ ನನ್ನಂತಹ ಸಾವಿರಾರು ಮಂದಿ ನಿರುದ್ಯೋಗಿಗಳ ಸಮಸ್ಯೆ. ಸರ್ಕಾರ ಈ ಬಗೆಗೆ ಗಮನಹರಿಸಿ ಐದು ವರ್ಷಕ್ಕೊಮ್ಮೆ ಪ್ರಮಾಣ ಪತ್ರ ಪಡೆಯುವ ವ್ಯವಸ್ಥೆಯನ್ನು ಜಾರಿಗೆ ತರಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.