ADVERTISEMENT

ಪ್ರಮಾಣ ಮಾಡಿ!

​ಪ್ರಜಾವಾಣಿ ವಾರ್ತೆ
Published 7 ಮೇ 2018, 19:30 IST
Last Updated 7 ಮೇ 2018, 19:30 IST

ಚುನಾವಣಾ ಪ್ರಚಾರ ಕಾರ್ಯದಲ್ಲಿ ನಿರತ ಎಲ್ಲಾ ಪಕ್ಷಗಳೂ ಭ್ರಷ್ಟಾಚಾರದ ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ. ಸರಿಯೇ, ಹಾಗೆಯೇ ‘ನಾವು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ಮಾಡುವುದಿಲ್ಲ’ವೆಂದು ಎಲ್ಲಾ ಪಕ್ಷಗಳ ಅಭ್ಯರ್ಥಿಗಳೂ ಮತದಾರರ ಬಳಿ ಪ್ರಮಾಣ ಮಾಡುವಂತಾಗಬೇಕು! ನಮ್ಮ ರಾಜಕೀಯ ಸ್ವಚ್ಛವಾಗಬೇಕೆಂದರೆ ಇದೊಂದೇ ದಾರಿ! ಏಕೆಂದರೆ ಈಗ ಇವರು ಹೇಳುತ್ತಿರುವ ಅಭಿವೃದ್ಧಿಯ ಹಿಂದಿನ ಹಣ ಪೀಕುವ ಕೈಂಕರ್ಯ ಎಲ್ಲರಿಗೂ ಗೊತ್ತೇ ಇದೆ. ವಿಧಾನಸೌಧವೇ ಭ್ರಷ್ಟಾಚಾರದ ಗಂಗೋತ್ರಿ ಆಗಿರುವುದರಿಂದ ಮೊದಲು ಅಲ್ಲಿಗೆ ಹೋಗುವವರು ಸ್ವಚ್ಛವಾಗಿರಲಿ. ‘ನಾನು ಶಾಸಕನಾಗಿ ಆರಿಸಿಬಂದರೆ ಲಂಚದ ಬಿಡಿ ಕಾಸನ್ನೂ ಮುಟ್ಟುವುದಿಲ್ಲ’ವೆಂದು ಪ್ರತಿಯೊಬ್ಬ ಅಭ್ಯರ್ಥಿಯೂ ಆಣೆ– ಪ್ರಮಾಣ ಮಾಡಲಿ. ಹಾಗೆಂದು ಮತದಾರರೂ ಒತ್ತಾಯಿಸಲಿ.

-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT