ಪ್ರಸಕ್ತ ಸಾಲಿನ ದೇವರಾಜ ಅರಸು ಪ್ರಶಸ್ತಿಗಾಗಿ ಕೋಣಂದೂರು ಲಿಂಗಪ್ಪ ಆಯ್ಕೆಯಾಗಿರುವುದು ಗೊತ್ತಿರುವ ಸಂಗತಿ.
ಆದರೆ ಈ ಪ್ರಶಸ್ತಿಗಾಗಿ ನೂರಕ್ಕಿಂತ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು.
ಅದರಲ್ಲಿ 23 ಮಂದಿ, ಮುಖ್ಯಮಂತ್ರಿಯವರ ಹಾಗೂ ತಮ್ಮ ಮನೆಗೆ ಅಲೆದಾಡಿದ ವಿಷಯವನ್ನು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರೇ ಬಹಿರಂಗಪಡಿಸಿದ್ದಾರೆ.
ಪ್ರಶಸ್ತಿಗಳನ್ನು ಕೇಳಿ ಪಡೆಯುವುದು ಅವಮಾನ. ಅನೇಕ ಅರ್ಹರು, ಸಂಕೋಚದಿಂದ ಅರ್ಜಿಗಳನ್ನು ಸಲ್ಲಿಸುವುದಿಲ್ಲ. ಅರ್ಜಿ ಸಲ್ಲಿಸದ ಲಿಂಗಪ್ಪ ಅವರನ್ನು ಆಯ್ಕೆ ಮಾಡಿರುವ ಆಯ್ಕೆ ಸಮಿತಿ ನಿಜಕ್ಕೂ ಅಭಿನಂದನಾರ್ಹ.
-ಕೆ.ಎಸ್. ಅಶ್ವತ್ಥನಾರಾಯಣ ಬೆಂಗಳೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.