ADVERTISEMENT

ಬಜೆಟ್ ಜಾರಿ ಆದೀತೇ?

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 19:30 IST
Last Updated 25 ಮಾರ್ಚ್ 2012, 19:30 IST

ಮುಖ್ಯಮಂತ್ರಿ ಸದಾನಂದ ಗೌಡರು ಹಟಕ್ಕೆ ಬಿದ್ದು ಈ ವರ್ಷದ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಎಲ್ಲ ವರ್ಗದ ಜನರಿಗೂ ಹೆಚ್ಚು ಕಡಿಮೆ ಇಷ್ಟವಾಗಿದೆ. ಈ ಬಜೆಟ್ ಅನುಷ್ಠಾನಕ್ಕೆ ಬರಬೇಕು ಎಂಬುದು ಎಲ್ಲರ ಬಯಕೆ. ಹಿಂದಿನ ವರ್ಷ ಬಿ.ಎಸ್.ಯಡಿಯೂರಪ್ಪ ಮೊದಲ ಕೃಷಿ ಬಜೆಟ್ ಮಂಡಿಸಿದ್ದರು. ಆದರೆ ಅದು ಸರಿಯಾಗಿ ಜಾರಿಗೆ ಬರಲಿಲ್ಲ. ಆದ್ದರಿಂದ ಬಜೆಟ್ ಮಂಡನೆ ಮುಖ್ಯವಲ್ಲ ಅದು ಜಾರಿಯಾಗುವುದು ಮುಖ್ಯ.

ಬಜೆಟ್ ಜಾರಿಯಾಗಬೇಕೆಂದರೆ ಸಂಪನ್ಮೂಲ ಕ್ರೋಢೀಕರಣ ಮುಖ್ಯ. ರಾಜ್ಯಕ್ಕೆ ಹೆಚ್ಚು ಆದಾಯ ತಂದು ಕೊಡುವ ಇಲಾಖೆಗಳಿಗೆ ದಕ್ಷ ಅಧಿಕಾರಿಗಳನ್ನು ನೇಮಕ ಮಾಡಿಕೊಂಡು ಕಾಲಕಾಲಕ್ಕೆ ಸಂಪನ್ಮೂಲ ಸಂಗ್ರಹಿಸಿ ಅದನ್ನು ಸಕಾಲಕ್ಕೆ ಅಭಿವೃದ್ಧಿ ಯೋಜನೆಗಳಿಗೆ ಬಿಡುಗಡೆ ಆಗುವಂತೆ ನೋಡಿಕೊಳ್ಳಬೇಕು.

ದುರದೃಷ್ಟದ ವಿಚಾರ ಎಂದರೆ ಗೌಡರ ಸಂಪುಟದಲ್ಲಿರುವ ಕೆಲ ಮಂತ್ರಿಗಳಿಗೆ ಕೆಲಸ ಮಾಡುವ ಹುಮ್ಮಸ್ಸು ಇಲ್ಲ. ಇಂತಹ ಸಚಿವರನ್ನು ಇಟ್ಟುಕೊಂಡು ಬಜೆಟ್ ಜಾರಿಗೆ ತರಲು ಸಾಧ್ಯವೇ? 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.