ADVERTISEMENT

ಬಸ್‌ ಫಲಕ ಸರಿಪಡಿಸಿ

ಕುಂದು ಕೊರತೆ

ಬೆಳ್ಳಾವೆ ರಮೇಶ
Published 21 ಸೆಪ್ಟೆಂಬರ್ 2015, 19:54 IST
Last Updated 21 ಸೆಪ್ಟೆಂಬರ್ 2015, 19:54 IST

ಬಸ್‌ಗಳ ಮಾರ್ಗ ಸಂಖ್ಯೆ ದೊಡ್ಡದಾಗಿ ಕಣ್ಣಿಗೆ ರಾಚುವಂತೆ ಫ್ಲಡ್‌ ಲೈಟ್‌ಗಳಿಂದ ರಾರಾಜಿಸುವಂತೆ ಕೂಡಲೇ ಬಿ.ಎಂ.ಟಿ.ಸಿ. ಮಾಡಬೇಕಾಗಿದೆ. ಈಗ ಶೇ 30ರಷ್ಟು ಬಸ್‌ಗಳ ಮಾರ್ಗಸಂಖ್ಯೆ ದೊಡ್ಡದಾಗಿ ಬರೆಸಲಾಗಿದೆ. ರಾತ್ರಿ ವೇಳೆ ಲೈಟ್‌ಗಳ ಬೆಳಕಿನಲ್ಲಿ ಕಾಣುವುದರಿಂದ ವಿಶೇಷವಾಗಿ ವಯಸ್ಸಾದವರಿಗೆ, ಹಿರಿಯರಿಗೆ ಕಾಣಿಸುತ್ತದೆ.

ಶೇ 70ರಷ್ಟು ಬಸ್‌ಗಳ ಮಾರ್ಗ ಸಂಖ್ಯೆ ಕಾಣುವುದೇ ಇಲ್ಲ. ದೂಳಿನಿಂದ ಮುಚ್ಚಿಹೋಗಿರುತ್ತದೆ. ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್‌ಗಳ ಮಾರ್ಗಗಳ ಸಂಖ್ಯೆ ದೀಪಗಳಿಂದ ಅಲಂಕೃತವಾದರೆ, ರಾತ್ರಿ ವೇಳೆ ನಮಗೆ ಅನುಕೂಲ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಲಿ.

ಇನ್ನೊಂದು ಸಂತಸದ ಸಂಗತಿ. ಉಲ್ಲಾಳು ಉಪನಗರ ಮುಖ್ಯರಸ್ತೆಯಲ್ಲಿರುವ ಸರೋಜಾ ಆಂಗ್ಲ ಶಾಲೆ ಹಾಗೂ ಅಭಯ ಆಸ್ಪತ್ರೆ ಬಳಿ ಪೋಸ್‌್ಟ ಬಾಕ್‌್ಸ (ಅಂಚೆ ಪೆಟ್ಟಿಗೆ) ಬೇಕು ಅಂತ ಬರೆದ ನನ್ನ ಪತ್ರಕ್ಕೆ ಸ್ಪಂದಿಸಿ, ಅಂಚೆ ಇಲಾಖೆಯವರು ಇಲ್ಲಿ ಪೋಸ್‌್ಟ ಬಾಕ್‌್ಸ ಇಟ್ಟಿದ್ದಾರೆ. ಇದಕ್ಕಾಗಿ ಇಲಾಖೆಗೆ ವಂದನೆಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.