
ದೇವೇಗೌಡ ಪೆಟ್ರೋಲ್ ಬಂಕ್‌ನಿಂದ ಕೆಂಗೇರಿ ಕಡೆಗೆ ಪ್ರಯಾಣಿಸುವ ಪ್ರಯಾಣಿಕರು ಬಸ್ಸಿಗಾಗಿ ಕಾಯುವ ಕರ್ಮ ಒಂದೆಡೆ. ವಾಹನಗಳ ಓಡಾಟದಿಂದ ಆವರಿಸುವ ದೂಳು, ಪ್ರತಿಯೊಬ್ಬರೂ ಕರವಸ್ತ್ರ ಮೂಗಿಗೆ ಹಿಡಿಯಬೇಕಾದ ಪರಿಸ್ಥಿತಿ ಇನ್ನೊಂದೆಡೆ.
ಇನ್ನು 8–10 ವರ್ಷಗಳಾದರೂ ಇಲ್ಲಿನ ‘ಮೆಟ್ರೊ’ ಕಾಮಗಾರಿ ಮುಗಿಯುವ ಸೂಚನೆ ಇಲ್ಲ. ಬರುವ ಎಲ್ಲ ಬಸ್‌ಗಳಲ್ಲಿಯೂ ಶ್ರೀನಗರ– ವಿಜಯನಗರ ಫಲಕ ಇರುತ್ತೆ. ಕೆಂಗೇರಿ ಕಡೆಗೆ ಹೋಗುವ ಬಸ್‌ಗಳು ಮಾತ್ರ ಗಂಟೆಗಟ್ಟಲೆ ಕಾದರೂ ಬರುವುದೇ ಇಲ್ಲ. ಸಾರಿಗೆ ಇಲಾಖೆ ಈ ಬಗ್ಗೆ ಗಮನಿಸಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.