
ಯಶವಂತಪುರ, ಕೆಂಗೇರಿ ನಡುವೆ ಸಂಚರಿಸುವ ಬಸ್ಸುಗಳು ರಾತ್ರಿ 9 ಗಂಟೆ ನಂತರ ಅಪರೂಪವಾಗಿವೆ. ಕೆಲವೊಮ್ಮೆ ಬಸ್‌ಸ್ಟಾಪ್‌ನಲ್ಲಿ ಪ್ರಯಾಣಿಕರಿದ್ದರೂ ಬಸ್ ನಿಲ್ಲುವುದಿಲ್ಲ. ಯಶವಂತಪುರದಿಂದ ಕೆಂಗೇರಿ ನಡುವಿನ ಸ್ಥಳಗಳಿಗೆ ಹೋಗುವ ಪ್ರಯಾಣಿಕರು ರಾತ್ರಿ 10 ಗಂಟೆಯಾದರೂ ಸ್ಟಾಪ್‌ಗಳಲ್ಲಿ ಕಿಕ್ಕಿರಿದು ನಿಂತಿರುತ್ತಾರೆ. ಆದ್ದರಿಂದ ಯಶವಂತಪುರ–ಕೆಂಗೇರಿ ಹಾಗೂ ಹೆಬ್ಬಾಳದಿಂದ ಬನಶಂಕರಿಯ ಕಡೆ ಸಂಚರಿಸುವ ಬಸ್ಸುಗಳನ್ನು ರಾತ್ರಿ 11 ಗಂಟೆಯಯವರೆಗೂ ಓಡಾಡುವಂತೆ ಮಾಡಿದರೆ, ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುವ ಪ್ರಯಾಣಿಕರಿಗೆ ತುಂಬಾ ಉಪಯೋಗವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.