ಕರ್ನಾಟಕದಲ್ಲಿ ಕನ್ನಡದ ನಾಮಫಲಕ ಎಷ್ಟು ಮುಖ್ಯವೊ ಹಾಗೆ, ಬೆಂಗಳೂರು ಬಸ್ಸುಗಳಲ್ಲಿ ಕನ್ನಡದ ಮಾರ್ಗಸೂಚನೆ ಫಲಕ ಅಷ್ಟೆ ಮುಖ್ಯ. ಅದರಲ್ಲಿ ತಪ್ಪುಗಳಿದ್ದರೆ ಪರಿಶೀಲಿಸಿ ಸರಿಪಡಿಸುವುದು ಮೇಲಧಿಕಾರಿಗಳ ಕರ್ತವ್ಯ.
ಆದರೆ ಆ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಅಂತದೊಂದು ಸಮಸ್ಯೆ ಬೆಂಗಳೂರನ್ನೇ ಸುತ್ತಿ ಬರುವ, ಬೆಂಮಸಾಸಂ ಬಸ್ಸಿನಲ್ಲಿದೆ. ಒಮ್ಮೆ ನಾನು ಎಚ್‌ಎಎಲ್‌ನ ಇಎಸ್‌ಐ ಲೋಕಲ್ ಆಫೀಸಿಗೆ ಎಲೆಕ್ಟ್ರಾನಿಕ್ ಸಿಟಿಯಿಂದ ಹೋಗುತ್ತಿರುವಾಗ ಮುಂದೆ ಹೋಗುತ್ತಿದ್ದ ಬಸ್ ಬೋರ್ಡ್ ನೋಡಿ ಬೇಸರಗೊಂಡೆ.
ಬನಶಂಕರಿ- ಚಂದಾಪುರ ಬಸ್ಸಿನ (ಮಾರ್ಗ ಸಂಖ್ಯೆ 600ಎಫ್, ನಂ. ಕೆಎ 01, ಎಫ್- 8859, ವಿಭಾಗ 32, ಬಣ್ಣ ನೀಲಿ) ಎಲೆಕ್ಟ್ರಾನಿಕ್ ಫಲಕದಲ್ಲಿ ಎಲೆಕ್ಟ್ರಾನಿಕ್ ಸಿಟಿ ಬದಲಾಗಿ ‘ಎಲೆಕ್ಟಾನಿಚಕ್’ ಎಂದು ಬರೆದಿತ್ತು. ನಾನು ಬೊಮ್ಮನಹಳ್ಳಿಯವರೆಗೂ ಗಮನಿಸಿದ್ದೇನೆ. ದಯವಿಟ್ಟು ಬೆಂಮಸಾಸಂ ಮೇಲಾಧಿಕಾರಿಗಳು ಇದನ್ನು ಸರಿಪಡಿಸಬೇಕಾಗಿ ಮನವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.