ADVERTISEMENT

ಬೀಜ, ಗೊಬ್ಬರ ಪೂರೈಸಿ

ಡಾ.ಸಮೀರ ಎಲ್.ಹಾದಿಮನಿ
Published 3 ಜೂನ್ 2014, 19:30 IST
Last Updated 3 ಜೂನ್ 2014, 19:30 IST

ರಾಜ್ಯದಲ್ಲಿ ಶೀಘ್ರದಲ್ಲೇ ಮುಂಗಾರು ಪ್ರವೇಶಿ­ಸ­ಲಿದ್ದು, ರೈತಸಮುದಾಯ ಹದಗೊಳಿ­ಸಿ­ರುವ ಜಮೀನಿನೊಂದಿಗೆ ಹರ್ಷೋನ್ಮುಖರಾಗಿ ಮುಂಗಾರು ಮಳೆಯನ್ನು ಸ್ವಾಗತಿಸಲು ಕಾತರ­ರಾಗಿದ್ದಾರೆ.

ಕೃಷಿಗೆ ಪೂರಕ ಬಿತ್ತನೆ ಬೀಜ, ಸಾವಯವ ಗೊಬ್ಬರ, ಕ್ರಿಮಿನಾಶಕ ರಾಸಾಯನಿಕಗಳನ್ನು  ಪೂರೈ­ಸು­ವುದು ಸರ್ಕಾರದ ಆದ್ಯಕರ್ತವ್ಯ. ಆದರೆ ರಾಜ್ಯದ ಅನೇಕ  ತಾಲೂಕು ಕೃಷಿಕೇಂದ್ರ­ಗಳಲ್ಲಿ ಸಾಕಷ್ಟು  ಬಿತ್ತನೆ ಬೀಜ,ರಸಗೊಬ್ಬರಗಳ ದಾಸ್ತಾನು ಇಲ್ಲದಿರುವುದು  ರೈತರನ್ನು ಆತಂಕಕ್ಕೆ ಈಡುಮಾಡಿದೆ.

ಬರಗಾಲ, ಅತಿವೃಷ್ಟಿ,ಆಲಿಕಲ್ಲಿನ ಅಕಾಲ ಮಳೆಯಿಂದ ಪ್ರತಿವರ್ಷ ಒಂದಿಲ್ಲೊಂದು ರೀತಿ ನಷ್ಟ­ದಲ್ಲಿರುವ ರೈತ ಈ ಬಾರಿಯಾದರೂ ಒಳ್ಳೆ ಫಸ­ಲಿನ ನಿರೀಕ್ಷೆಯಲ್ಲಿದ್ದಾನೆ. ಸರ್ಕಾರ ರೈತರ ಬೇಡಿಕೆಗೆ ಅನುಗುಣವಾಗಿ ದಾಸ್ತಾನು ಒದಗಿ­ಸಲಿ. ಕೃಷಿ ಅಧಿಕಾರಿಗಳು  ರೈತರಿಗೆ ಲಾಭಕರ ಬೆಳೆಗಳ ಬಗ್ಗೆ ಮಾಹಿತಿಯನ್ನು ನೀಡಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.