ADVERTISEMENT

ಬೀದಿ ದೀಪ ಆರಿಸಬೇಡಿ!

ಗೌರಿಬಿದನೂರು ರಂಗಪ್ಪ
Published 18 ಜನವರಿ 2016, 19:30 IST
Last Updated 18 ಜನವರಿ 2016, 19:30 IST
ಬೀದಿ ದೀಪ ಆರಿಸಬೇಡಿ!
ಬೀದಿ ದೀಪ ಆರಿಸಬೇಡಿ!   

ಬೆಂಗಳೂರು ನಗರ ಹೊರವಲಯ ಗ್ರಾಮಾಂತರ ಪ್ರದೇಶಗಳಲ್ಲಿ ಬೀದಿ ದೀಪಗಳ ನಿರ್ವಹಣೆಯು ಬಿಬಿಎಂಪಿಗೆ ಸೇರಿರುವುದು ಸರಿ. ವಿದ್ಯುತ್‌ನ ಮಿತಬಳಕೆಯ ಉದ್ದೇಶದಿಂದ ಬೆಳಿಗ್ಗೆ 6 ಗಂಟೆ ಸಮಯಕ್ಕಾಗಲೇ ಬೀದಿ ದೀಪಗಳನ್ನು ಪಾಲಿಕೆಯವರು ಆರಿಸಿಬಿಡುತ್ತಾರೆ.

ಈಗ ಚಳಿಗಾಲದಲ್ಲಿ ಬೆಳಿಗ್ಗೆ 6ರ ಸಮಯದಲ್ಲಿ ಕತ್ತಲು ದಟ್ಟವಾಗಿಯೇ ಇರುತ್ತದೆ. ಹಾಗಾಗಿ ದೀಪಗಳು ಆ ಸಮಯದಲ್ಲಿ ಉರಿಯದೆ ಇರುವುದರಿಂದ ಕೆಲಸಕ್ಕಾಗಿ ಹೋಗುವ ಅನೇಕರಿಗೆ ಮಂಜು ಮತ್ತು ಕತ್ತಲೆಯಿಂದ ತೊಂದರೆಯಾಗುತ್ತಿದೆ. ಇನ್ನೆರಡು ತಿಂಗಳಾದರೂ ಬೀದಿ ದೀಪಗಳನ್ನು ಕನಿಷ್ಠ 6.30 ಅಥವಾ 7  ಗಂಟೆಯವರೆಗೂ ಉರಿಯಲು ಬಿಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.