ADVERTISEMENT

ಬ್ರಿಟಿಷರ ಕಾಲದ ಒಪ್ಪಂದ ಅಪ್ರಸ್ತುತ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 19:30 IST
Last Updated 10 ಅಕ್ಟೋಬರ್ 2012, 19:30 IST

ಕಾವೇರಿ ಒಪ್ಪಂದವು ಬ್ರಿಟಿಷರ ಕಾಲದ್ದು. ಹಿಂದೆ ಬೆಂಗಳೂರು ಮಿತಿಯಲ್ಲಿ ಇದ್ದುದರಿಂದ ಇಲ್ಲಿನ ಜನತೆಗೆ ತಿಪ್ಪಗೊಂಡನಹಳ್ಳಿಯ ಜಲಾಶಯದ ನೀರು ಸಾಕಾಗುತ್ತಿತ್ತು.

ಆದರೆ ಈಗ ಮಳೆಯು ಸರಿಯಾಗಿ ಆಗದೆ ಕಾವೇರಿ ಜಲಾನಯನ ಪ್ರದೇಶದ ರೈತ ಜನರು ಕಂಗಾಲಾಗಿದ್ದಾರೆ. ರೈತರಿಗೆ ನೀರು ದೊರಕದೇ ಇರುವಾಗ ನಗರಕ್ಕೆ ನೀರು ಹೇಗೆ ದೊರಕುವುದು?

ಕಾವೇರಿ ನೀರಿನ ಹಂಚಿಕೆಯ ಸೂತ್ರ ರೂಪಿಸಿದವರು ಕಡಿಮೆ ನೀರು ಇದ್ದಾಗ ಮತ್ತು ಉಭಯ ರಾಜ್ಯಗಳು ಪರಿಸ್ಥಿತಿ ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಯಾವ ಸಲಹೆ, ಸೂಚನೆ  ನೀಡಿಲ್ಲ. ಅಜ್ಜ ಹಾಕಿದ ಆಲದ ಮರಕ್ಕೆ ಜೋತು ಬೀಳದೆ ತಜ್ಞರು ಮತ್ತು ನ್ಯಾಯಾಲಯಗಳು ಸೂಕ್ತ ಸೂಚನೆಗಳನ್ನು ಕೊಟ್ಟರೆ ರಾಜ್ಯದ ರೈತರು ಮತ್ತು ಸಾಮಾನ್ಯರು ನೆಮ್ಮದಿಯಿಂದ ಇರಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.