ADVERTISEMENT

ಭ್ರಷ್ಟಾಚಾರದ ಮೂಲಬೇರು ಕೀಳಬೇಕು

ಎಂ.ಪರಮೇಶ್ವರಪ್ಪ, ದಾವಣಗೆರೆ
Published 2 ಸೆಪ್ಟೆಂಬರ್ 2013, 19:59 IST
Last Updated 2 ಸೆಪ್ಟೆಂಬರ್ 2013, 19:59 IST

ಕರ್ನಾಟಕ ಲೋಕಸೇವಾ ಆಯೋಗದ  ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯನ್ನು ಶೋಧನಾ ಸಮಿತಿಯ ಮೂಲಕ ಮಾಡಬೇಕು ಎಂದು ಪಿ.ಸಿ. ಹೋಟಾ ಸಮಿತಿ ಮಾಡಿದ್ದ ಶಿಫಾರಸನ್ನು ಸರ್ಕಾರ ತಿರಸ್ಕರಿಸಿರುವುದು ಸರಿಯಲ್ಲ.

ಭ್ರಷ್ಟಾಚಾರದ ಆರೋಪ ಇರುವುದೇ ಅಧ್ಯಕ್ಷರು ಮತ್ತು ಸದಸ್ಯರ ಮೇಲೆ. ಮುಖ್ಯಮಂತ್ರಿಯವರು ಭ್ರಷ್ಟಾಚಾರದ ಮೂಲ ಬೇರನ್ನೇ ಕೀಳದೆ ಅದಕ್ಕೆ ಸಾಮಾಜಿಕ ನ್ಯಾಯದ ನೆಪದಲ್ಲಿ ರಕ್ಷಣೆ ನೀಡುವುದು ಎಷ್ಟರಮಟ್ಟಿಗೆ ಸರಿ? ನೇಮಕಾತಿ ಮಾಡುವವರ ನೇಮಕಾತಿಯನ್ನೂ ಪಾರದರ್ಶಕಗೊಳಿಸಬೇಕಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.