ಬೆಂಗಳೂರು ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಮತ್ತೊಂದು ತಂಡವನ್ನು (ವಿಷನ್ ಗ್ರೂಪ್) ರಚಿಸಿದೆ. ಮುಖ್ಯಮಂತ್ರಿ ನೇತೃತ್ವದ ಈ ತಂಡದಲ್ಲಿ ಅನೇಕ ಪ್ರತಿಷ್ಠಿತ ವ್ಯಕ್ತಿಗಳಿದ್ದಾರೆ.
ಬೆಂಗಳೂರಿನ ಅಭಿವೃದ್ಧಿಗಾಗಿ ಈಗಾಗಲೇ ಸಾಕಷ್ಟು ಸಂಘ–ಸಂಸ್ಥೆಗಳು, ಬಿಡಿಎ, ಬಿಬಿಎಂಪಿ ಮುಂತಾದ ಸರ್ಕಾರಿ ಸಂಸ್ಥೆಗಳು ಇರುವಾಗ ಹೊಸ ತಂಡ ರಚನೆಯ ಔಚಿತ್ಯವೇನಿತ್ತು? ಸರ್ಕಾರದ ಯಾವುದೇ ಯೋಜನೆಯನ್ನು ಅನುಷ್ಠಾನಕ್ಕೆ ತರುವವರು ಅಧಿಕಾರಿಗಳು.
ನಿಷ್ಠಾವಂತ ಅಧಿಕಾರಿಗಳನ್ನು ಆಗಿಂದಾಗ್ಗೆ ಎತ್ತಂಗಡಿ ಮಾಡುತ್ತಿದ್ದರೆ, ಇಂಥ ಎಷ್ಟು ತಂಡಗಳು ರಚನೆಯಾದರೂ ಕಸ ವಿಲೇವಾರಿ ಅವ್ಯವಸ್ಥೆ ಹಾಗೇ ಇರುತ್ತದೆ. ಜೋರು ಮಳೆ ಬಂದರೆ ಬೆಂಗಳೂರಿಗರು ಕಂಗಾಲಾಗುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.