ಮನುಷ್ಯರು
ಮನುಷ್ಯರನ್ನು ರೂಪಿಸಲು ಬರುವುದಿಲ್ಲ
ನದಿಗಳಾಗಿ, ಮರಗಳಾಗಿ, ಹಕ್ಕಿ ಹೂಗಳಾಗಿ
ಮನುಷ್ಯರನ್ನು ಮೌಲ್ಡ್ ಮಾಡಲು
ಬರುತ್ತದೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರಾಗಿ
ಮೌಲ್ಡ್ ಗೊಂಡ ಮನುಷ್ಯರು ಮಾತ್ರ
ತಮ್ಮನ್ನು ಮನುಷ್ಯರೆಂದು ಕೊಳ್ಳುತ್ತಾರೆ
ಏನೂ ಆಗದೆ ಇರುವವರನ್ನು
ನೋಡುತ್ತಾರೆ ಕೇವಲವಾಗಿ
ಮನುಷ್ಯರಲ್ಲ ಎಂಬಂತೆ ಕೇವಲ
ಕೇವಲವಾಗಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.