
ಮಾಟ, ವಾಮಾಚಾರ, ಓಕುಳಿ
ನಿಷೇಧಕ್ಕೆ ಬರಲಿದೆ ಮಸೂದೆ!
ಆದರೆ ರಾಜಕಾರಣಿಗಳ ಚಾಳಿ ಸೃಷ್ಟಿಸಿದೆ
ಸಾಕಷ್ಟು ತಗಾದೆ
ರಾಹುಕಾಲದಲ್ಲೇ ಸಲ್ಲಿಕೆಯಾಗಲಿ
ನಾಮಪತ್ರ!
ಪೂಜೆಯಿಂದ ಮುಕ್ತವಾಗಲಿ
ಮತಯಂತ್ರ!
ನಿಲ್ಲಲಿ ವಾಸ್ತುವಿನ ಹೆಸರಿನಲ್ಲಿ
ಗಾದಿ ಪೂಜೆ,
ಎಷ್ಟು ನುಂಗಲಿ ಎಂಬ ಗುಂಗಿನಲ್ಲಿ
ಮಾಡುವ ಗುದ್ದಲಿ ಪೂಜೆ
ಸ್ವಾಮಿಗಳ ಬಹಿರಂಗ ಪಾದಪೂಜೆ
ಮತದಾರರ ಕೈ ಬೆಚ್ಚಗೆ ಮಾಡಿ
ಆಣೆ ಪ್ರಮಾಣ
ಮಾಡಿಸಿಕೊಳ್ಳುವ ಹಸ್ತಪೂಜೆ!
–ಎಲ್.ಎನ್.ಪ್ರಸಾದ್, ತುರುವೇಕೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.