ADVERTISEMENT

ಮಹಿಳೆಯರಿಗೆ ಬೋಗಿ ಒದಗಿಸಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2011, 19:30 IST
Last Updated 13 ಏಪ್ರಿಲ್ 2011, 19:30 IST

ಅರಸೀಕೆರೆ - ಬೆಂಗಳೂರು ಪುಶ್‌ಪುಲ್ ರೈಲು (ನಂ. 223 ಮತ್ತು 224) ಪ್ರತಿ ನಿತ್ಯ ಓಡಾಡುವವರ ರೈಲು ಎಂದು ಜನಜನಿತವಾಗಿದ್ದು ಅಷ್ಟೇ ಪ್ರಮಾಣದ ಜನ ಅಂದರೆ ಮೂರು ರೈಲಿಗಾಗುವಷ್ಟು ಜನರು ಇದರಲ್ಲಿ ಪ್ರಯಾಣಿಸುತ್ತಾರೆ. ಅದರಲ್ಲೂ ತುಮಕೂರು ನಗರವೊಂದರಿಂದಲೇ ಬೆಂಗಳೂರಿಗೆ ಉದ್ಯೋಗ ಮತ್ತು ಇತರೆ ವ್ಯವಹಾರಗಳ ಸಂಬಂಧ ಸಾವಿರಾರು ಜನರು ಸಂಚರಿಸುತ್ತಾರೆ. ಉದ್ಯೋಗಸ್ಥ ಮಹಿಳೆಯರೂ ಕೂಡ ನೂರಾರು ಸಂಖ್ಯೆಯಲ್ಲಿ ಪ್ರತಿನಿತ್ಯ ಪ್ರಯಾಣಿಸುತ್ತಾರೆ.

ಆದರೆ ಮಹಿಳೆಯರಿಗೆ ಈಗಿರುವ ಒಂದು ಬೋಗಿ ಏನೇನೂ ಸಾಲದು. ಕನಿಷ್ಠ  ಎರಡು ಬೋಗಿಗಳನ್ನಾದರೂ ಹಾಕಬೇಕು. ಹಾಲಿ ಇರುವ ಒಂದೇ ಒಂದು ಬೋಗಿಯಲ್ಲಿ ನೂರಾರು ಮಂದಿ ಕುರಿ ತುಂಬಿದ ಹಾಗೆ ತುಂಬಿಕೊಳ್ಳುವುದರಿಂದ ಉಸಿರುಗಟ್ಟಿ ನಿತ್ಯವೂ ಪ್ರಯಾಣ ಮಾಡುವ ದುಃಸ್ಥಿತಿ ಇದೆ.

ಆದುದರಿಂದ ದಯಮಾಡಿ ಸಂಬಂಧಿಸಿದ ರೈಲ್ವೆ ಇಲಾಖೆಯವರು ಇನ್ನೊಂದು ದೊಡ್ಡ ಬೋಗಿಯನ್ನು ಜೋಡಿಸುವ ಮೂಲಕ ಮಹಿಳೆಯರು ನಿರಾತಂಕವಾಗಿ ಪ್ರಯಾಣಿಸಲು ಅನುಕೂಲ ಕಲ್ಪಿಸಬೇಕೆಂದು ಕೋರುತ್ತೇವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.