ADVERTISEMENT

ಮಾಧ್ಯಮಗಳ ಉನ್ಮಾದ ದುರದೃಷ್ಟಕರ

ಶಿವಸುಂದರ್
Published 31 ಮಾರ್ಚ್ 2011, 19:00 IST
Last Updated 31 ಮಾರ್ಚ್ 2011, 19:00 IST

ಬದಲಾಗುತ್ತಿರುವ ರಾಜಕಾರಣಕ್ಕೆ ತಕ್ಕಂತೆ ಕ್ರೀಡಾ ಮನೋಧರ್ಮವೂ ಬದಲಾಗುತ್ತಿದೆ. ಅಥವಾ ಬದಲು ಮಾಡಲಾಗುತ್ತಿದೆ. ಭಾರತ-ಪಾಕಿಸ್ತಾನದ ನಡುವಿನ ಒಂದು ಕ್ರಿಕೆಟ್ ಪಂದ್ಯವನ್ನು ಎರಡು ರಾಷ್ಟ್ರಗಳ ನಡುವೆ ನಡೆಯಲಿರುವ ನಾಲ್ಕನೇ ಸಮರವೇನೊ ಎಂಬಂತೆ ಮಾಧ್ಯಮಗಳು ಒಂದು ಉನ್ಮಾದವನ್ನೇ ಸೃಷ್ಟಿಸಿದ್ದು ದುರದೃಷ್ಟಕರ. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ.

ಕ್ರೀಡೆಗೆ ಭಾಷಿಕರ, ಧಾರ್ಮಿಕರ ಅಥವಾ ದೇಶಪ್ರೇಮದ ಪ್ರತಿಷ್ಠೆಯ ಪ್ರಶ್ನೆ ಲಗಾಯಿಸಿಬಿಟ್ಟರೆ ಅದು ಸಾಯುತ್ತದೆ. ಭಾಷೆ, ಧರ್ಮ, ಮತ್ತು ದೇಶದ ಹೆಸರಲ್ಲಿ ಜನರನ್ನು ಒಡೆದು ಆಳುವ ರಾಜಕಾರಣಕ್ಕೆ ಕ್ರೀಡೆ ಮತ್ತು ಜನ ಬಲಿಪಶುವಾಗುತ್ತಾರೆ. ಮೊಹಾಲಿಯಲ್ಲಿ ನಡೆದ ಕ್ರಿಕೆಟ್ ಪಂದ್ಯವನ್ನು ಕಾರ್ಗಿಲ್ ಯುದ್ಧ ಎಂದು ವರ್ಣಿಸಿದ ಮಾಧ್ಯಮಗಳ ನಿಲುವು ವಿಚಿತ್ರ. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.