
ನಮ್ಮ ಸರ್ಕಾರ ಇತ್ತೀಚೆಗೆ ಅಂಗವಿಕಲರಿಗೆ ಆನೇಕ ಯೋಜನೆಗಳನ್ನು ಪ್ರಕಟಿಸಿದೆ. ಆದರೆ ಅವುಗಳ ಲಾಭ ಪಡೆಯಬೇಕಾದರೆ, ಅವೈಜ್ಞಾನಿಕವಾದ ಮಾನದಂಡಗಳನ್ನು ವಿಧಿಸಿದೆ. ಉದಾಹರಣೆಗೆ; ಅಂಗವಿಕಲರ ಮಾಸಿಕ ಪಿಂಚಣಿ ಪಡೆಯಬೇಕಾದರೆ ಪೋಷಕರ ವಾರ್ಷಿಕ ವರಮಾನ ವರ್ಷಕ್ಕೆ ₹ 17,500 ಮೀರಬಾರದು ಎಂದಿದೆ.
ಇಷ್ಟು ಕಡಿಮೆ ವರಮಾನದಲ್ಲಿ ಯಾರೇ ಆದರೂ ಜೀವಿಸಲು ಸಾಧ್ಯವೇ? ವಾರ್ಷಿಕ ಗರಿಷ್ಠ ವರಮಾನದ ಮಿತಿಯನ್ನು ₹ 4ಲಕ್ಷಕ್ಕೆ ಏರಿಸಿದರೆ ಅಂಗವಿಕಲ ಮಕ್ಕಳಿಗೆ ಪಿಂಚಣಿಯ ಲಾಭ ಸಿಗುತ್ತದೆ. ಆದರೆ ಅಂಗವಿಕಲರು ತ್ರಿಚಕ್ರ ವಾಹನ ಪಡೆಯಲು ನಿಗದಿ ಮಾಡಿರುವ ವಾರ್ಷಿಕ ಗರಿಷ್ಠ ಆದಾಯದ ಮಿತಿ ₹ 3 ಲಕ್ಷ ಇದೆ. ಈ ತಾರತಮ್ಯ ಏಕೆ? ಸಂಬಂಧಪಟ್ಟ ಸಚಿವರು, ಅಧಿಕಾರಿಗಳು ಗಮನ ಹರಿಸುವರೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.