ಬದುಕನ್ನು; ಈ ನಾಡನ್ನು
ಹಸನಾಗಿಸಬೇಕಾದ
ಹೊಳಪಿನ ಹಣವೂ ಕೂಡ
‘ಕಪ್ಪು ಹಣ’ವಾಗಿ ‘ಹೆಣ’ವಾಗಿ
ಕೊಳೆಯುತ್ತಿದೆ
ಸ್ವಿಸ್ ಬ್ಯಾಂಕಿನಲ್ಲಿ!
ಕೆಲವೇ ವ್ಯಕ್ತಿಗಳ; ಭ್ರಷ್ಠರ
ಕಪಿ ಮುಷ್ಠಿಯಲ್ಲಿ
ಬಡವರ ಬೆವರಿನ ಹಣ
ಸೇರಿ, ಕತ್ತಲು ತುಂಬಿದೆ
ಬಡ ಬಗ್ಗರ ಬದುಕಿನಲ್ಲಿ!
ಮುತುವರ್ಜಿ ವಹಿಸಿ
ಮುಲಾಜಿಲ್ಲದೆ
‘ಮುಟ್ಟುಗೋಲು’
ಹಾಕುವುದರ ಮೂಲಕ
ಬೆಳಕು ಮೂಡಿಸಬೇಕಿದೆ
ದೇಶದ ಬಡವರ ಮೊಗದಲ್ಲಿ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.