ADVERTISEMENT

ಮೊದಲಿದ್ದಂತೆ ಬಸ್ ಸೌಲಭ್ಯ ಕಲ್ಪಿಸಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ಕೆಂಗೇರಿ ಉಪನಗರದ ಕೆಎಚ್‌ಬಿ ಬಡಾವಣೆಯ (ಶಿರ್ಕೆ ಬಡಾವಣೆ) ಸುತ್ತಮುತ್ತ ವಿಶ್ವೇಶ್ವರಯ್ಯ ಬಡಾವಣೆ ಸೇರಿದಂತೆ ಈಗ ಬೇರೆ ಬೇರೆ ಬಡಾವಣೆಗಳು ತಲೆ ಎತ್ತಿವೆ.

ಜೊತೆಗೆ ರಿಂಗ್ ರೋಡ್ ಇರುವುದರಿಂದ ಕೆಲವು ವರ್ಷಗಳಿಂದ ಅನೇಕ ಕಡೆಗೆ ಬಸ್ ಸೌಲಭ್ಯವಿತ್ತು. ಇತ್ತೀಚೆಗೆ ಇಲ್ಲಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕಿದ್ದ 222ಎ ಎಫ್ ಕಣ್ಮರೆಯಾಗಿದೆ. ಜೊತೆಗೆ ಒಂದರ ಹಿಂದೆ ಒಂದು ಬರುತ್ತಿದ್ದ ಬನಶಂಕರಿ-ಬನಶಂಕರಿ ಸುತ್ತುವಳಿ 500 ಮತ್ತು 600 ನಂಬರಿನ ಬಸ್ಸುಗಳು ನಾಪತ್ತೆಯಾಗಿವೆ.
 
405 ಡಿ ಮತ್ತು ಹೊಸಕೋಟೆಗೆ ಇದ್ದ 317 ಕಣ್ಮರೆಯಾಗಿ ಎರಡು ವರ್ಷವಾಯಿತು. ಅನೇಕ ಪ್ರದೇಶಗಳಿಗೆ ಅನುಕೂಲವಾಗಿದ್ದ 405 ಸರಣಿಯೂ ಹೋಗಿ ನಾಲ್ಕೈದು ವರ್ಷವಾಯಿತು.

ಜನಸಂಖ್ಯೆ ಹೆಚ್ಚಾಗುತ್ತಿದ್ದು, ಜನರ ಸಂಚಾರವೂ ಹೆಚ್ಚುತ್ತಿದ್ದರೂ ಈ ಪ್ರದೇಶಕ್ಕೆ ಇದ್ದ ಅನೇಕ ಬಸ್ ಸೌಲಭ್ಯವನ್ನು ಏಕೆ ಕಡಿಮೆ ಮಾಡಲಾಗಿದೆ ಎಂಬುದು ತಿಳಿಯದು.

ಜನರು ಈಗ ಮೆಜೆಸ್ಟಿಕ್, ಮಾರುಕಟ್ಟೆ, ಶಿವಾಜಿನಗರ ಮತ್ತು ಕೆ.ಆರ್ ಮಾರುಕಟ್ಟೆಗೆ ಹೋಗಲು ದಿನ ನಿತ್ಯ ಪರದಾಡುವಂತಾಗಿದೆ. ಈ ಸಮಸ್ಯೆಯ ಬಗೆಗೆ ಪರಿಶೀಲಿಸಿ ಈ ಪ್ರದೇಶಗಳಿಗೆ ಹಿಂದಿನಂತೆ ಹೆಚ್ಚು ಬಸ್ ಸೌಲಭ್ಯ ಒದಗಿಸಲು ಬಿಎಂಟಿಸಿ ಆಡಳಿತಕ್ಕೆ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.