ವಿವೇಕನಗರ ಮುಂದುವರೆದ ಬಡಾವಣೆ, ಈಜಿಪುರದ ಮುಖ್ಯರಸ್ತೆಯ (ಶಾಲಿಮಾರ್ ಹೋಟೆಲ್) ಪಕ್ಕದ 2ನೇ ಅಡ್ಡರಸ್ತೆಯಲ್ಲಿ ಚರಂಡಿ ನೀರು ನಿರಂತರವಾಗಿ ಹರಿಯುತ್ತಿದೆ. ಒಂದು ಕಡೆಯಿಂದ ಮೋರಿಯಲ್ಲಿ ಹರಿಯುತ್ತಿರುವ ಒಳಚರಂಡಿಯ ತ್ಯಾಜ್ಯ ನೀರು ಮತ್ತೆ ಮೋರಿಗೆ ಅಥವಾ ಚೇಂಬರಿಗೆ ಹರಿದುಹೋಗಲು ಈ ರಸ್ತೆಗೆ ಮೋರಿಯೇ ಇಲ್ಲದೆ ರಸ್ತೆ ಮೇಲೆಲ್ಲಾ ಹರಿಯುತ್ತಿದೆ. ನಾಗರಿಕರು ಈ ತ್ಯಾಜ್ಯ ನೀರನ್ನು ತುಳಿದುಕೊಂಡೇ ರಸ್ತೆ ದಾಟಬೇಕಾಗಿದೆ.
ಅದರಲ್ಲೂ ದ್ವಿಚಕ್ರ ವಾಹನ, ಕಾರುಗಳು ಬಂದಾಗ ಪಾದಚಾರಿಗಳ ಮೇಲೆ ಮಲಿನ ನೀರು ಸಿಡಿಯುತ್ತದೆ. ಅಲ್ಲದೆ 1ನೇ ಕ್ರಾಸ್‌ನಲ್ಲಿ ಒಳಚರಂಡಿ ಪೈಪುಗಳು ತುಂಬಾ ಹಳೆಯದಾಗಿದ್ದು, ಈ ರಸ್ತೆಗೆ ಹೊಸ ಪೈಪುಗಳನ್ನು ಅಳವಡಿಸಬೇಕೆಂದು ಹಲವಾರು ಬಾರಿ ಕೌನ್ಸಿಲರ್, ಶಾಸಕರಿಗೂ ಮನವಿ ಸಲ್ಲಿಸಲಾಗಿದೆ. ಆದರೂ ಹೊಸ ಪೈಪುಗಳನ್ನು ಅಳವಡಿಸಿಲ್ಲ. ಹಾಕಿಸುತ್ತೇವೆ ಎಂದು ಭರವಸೆ ನೀಡುತ್ತಲೇ ಬಂದಿದ್ದಾರೆ. ಮೇಯರ್ ಈ ಸಮಸ್ಯೆ ಕುರಿತು ಗಮನಿಸಬೇಕೆಂದು ಹಾಗೂ ಶೀಘ್ರವೇ ಒಳಚರಂಡಿಗೆ ಹೊಸ ಪೈಪುಗಳನ್ನು ಹಾಕಿಸಲು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ.
–ಎಲ್. ನಾರಾಯಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.