ADVERTISEMENT

ಯಶೋಗಾಥೆಯ ಸ್ಫೂರ್ತಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2018, 19:30 IST
Last Updated 12 ಮಾರ್ಚ್ 2018, 19:30 IST

ಮಹಿಳಾ ದಿನದ ವಿಶೇಷ ಪುಟಗಳು (ಪ್ರ.ವಾ., ಮಾ. 8) ಸಂಗ್ರಹಯೋಗ್ಯವಾಗಿವೆ. ಅವು, ಮಹಿಳಾ ಪರವಾದ ನಿಜವಾದ ಕಾಳಜಿ, ಆಸಕ್ತಿಯನ್ನು ಬಿಂಬಿಸುತ್ತವೆ. ಮಹಿಳೆಯರ ಯಶೋಗಾಥೆಗಳನ್ನು ಸಾಹಸಭರಿತವಾಗಿ, ರೋಮಾಂಚನಕಾರಿಯಾಗಿ, ಸರಳವಾಗಿ ಮತ್ತು ಸುಂದರವಾಗಿ ನಿಗದಿತ ಚೌಕಟ್ಟಿನೊಳಗೆ ಕಟ್ಟಿಕೊಟ್ಟ ‘ಪ್ರಜಾವಾಣಿ’ ಬಳಗಕ್ಕೆ ನಾಡಿನ ಸಮಸ್ತ ಮಹಿಳೆಯರ ಪರವಾಗಿ ಹಾಗೂ ಮಹಿಳೆಯರನ್ನು ಗೌರವಿಸುವ ಪ್ರತಿಯೊಬ್ಬ ಕನ್ನಡಿಗ ಪುರುಷನ ಪರವಾಗಿ ಅನಂತ ಧನ್ಯವಾದ.

ನಾಡಿನ ಮಹಿಳೆಯರ ಕನಸುಗಳಿಗೆ, ನಿರೀಕ್ಷೆಗಳಿಗೆ, ಭರವಸೆಗಳಿಗೆ ಪುಷ್ಟಿ ಕೊಡುವ ಕಾಯಕವನ್ನು ‘ಪ್ರಜಾವಾಣಿ’ ಬಳಗ ಮಾಡಿ ತೋರಿಸಿದೆ. ನಾನು ನನ್ನ ಶಾಲೆಯ ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಅಂದಿನ ‘ಪ್ರಜಾವಾಣಿ’ ಕೊಂಡು ಓದುವಂತೆ ಮಾಡಿದ್ದೇನೆ. ಹತ್ತನೇ ತರಗತಿಯ ಹೆಣ್ಣು ಮಕ್ಕಳು, ನಾಡಿನ ದಕ್ಷ ಮಹಿಳಾ ಅಧಿಕಾರಿಗಳ ಸಾಧನೆ ಓದಿ ಪುಳಕಿತರಾಗಿದ್ದಾರೆ. ‘ನಾವು ಆ ದಿಸೆಯಲ್ಲಿ ಕನಸು ಕಾಣುತ್ತೇವೆ’ ಅಂದಿದ್ದಾರೆ. ನನ್ನ ವಿದ್ಯಾರ್ಥಿನಿಯರ ಹೃದಯದಲ್ಲಿ ‘ಪ್ರಜಾವಾಣಿ’ಯು ಐ.ಎ.ಎಸ್., ಐ.ಪಿ.ಎಸ್‌. ಕನಸಿನ ಬೀಜ ಬಿತ್ತಿದೆ. ಭೇಷ್ ‘ಪ್ರಜಾವಾಣಿ’.

ಅದೇ ದಿನದ ಸಂಪಾದಕೀಯ ‘ಮಹಿಳೆಯ ಸಶಕ್ತ ದನಿ ರಾಜಕೀಯದಲ್ಲೂ ಮೊಳಗಲಿ’ ಅತ್ಯಂತ ಸಂದರ್ಭೋಚಿತ ಮತ್ತು ವಾಸ್ತವವನ್ನು ಧ್ವನಿಸುತ್ತದೆ.
-ಸಿರಾ ರಮೇಶ್ ರಾಠೋಡ್ಚಿ, ಚಿಕ್ಕನಹಳ್ಳಿ, ತುಮಕೂರು ಜಿಲ್ಲೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.